ಚಿಕ್ಕೋಡಿ (ಬೆಳಗಾವಿ):ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಲಾಕ್ಡೌನ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಸಂತೆ ನಡೆಸಲಾಗಿದೆ.
ಕೊರೊನಾ 2ನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕಠಿಣ ಲಾಕ್ಡೌನ್ ಘೋಷಿಸಿದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸಂತೆ ನಡೆಸುವಂತಿಲ್ಲ. ಆದರೂ ಕೂಡ ಹಾರೂಗೇರಿ ಪಟ್ಟಣದಲ್ಲಿ ಸಂತೆ ನಡೆಸಲಾಗಿದ್ದು, ಸಾಮಾಜಿಕ ಅಂತರ ಮರೆತು ನೂರಾರು ಜನರು ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.