ಬೆಳಗಾವಿ: ಹಿಜಾಬ್ ಪರ ಹೋರಾಟ ಮಾಡಿದ್ದ ಸಾಮಾಜಿಕ ಹೋರಾಟಗಾರ್ತಿಗೆ ವ್ಯಕ್ತಿಯೋರ್ವ ವಾಟ್ಸಪ್ ಕಾಲ್ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ಕಮಿಷನರ್ಗೆ ದೂರು ನೀಡಲಾಗಿದೆ.
ಬೆಳಗಾವಿಯ ಸೀಮಾ ಇನಾಮ್ದಾರ್ ಎಂಬುವವರಿಗೆ ಜೀವ ಬೆದರಿಕೆ ಹಾಕಲಾಗಿದ್ದು ಅವರು ಸಿಇಎನ್ ಠಾಣೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ನಿನ್ನೆ ವಾಟ್ಸಪ್ ಕಾಲ್ ಮಾಡಿದ್ದ ಅಪರಿಚಿತ ವ್ಯಕ್ತಿ 'ಹಿಜಾಬ್ ಹಿಜಾಬ್ ಅಂತಾ ಏನ್ ಹೇಳ್ತಿದ್ದೀಯಾ, ಆಜಾದಿ ಬೇಕಾ ನಿಮಗೆ? ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಲ್ಲದೇ, ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ' ಎಂದು ದೂರಿನಲ್ಲಿ ತಿಳಿಸಿದ್ದಾರೆ.