ಕರ್ನಾಟಕ

karnataka

ETV Bharat / city

ಏಳು ವರ್ಷದಲ್ಲಿ ಬಿಜೆಪಿ ಎಷ್ಟು ಕಡಿದುಕಟ್ಟೆ ಹಾಕಿದೆ ಅನ್ನೋದನ್ನ ನೋಡಿದ್ದೇವೆ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ - belagavi council election

ಬೆಳಗಾವಿ ವಿಧಾನ ಪರಿಷತ್​ ಚುನಾವಣೆ ಪ್ರಚಾರದಲ್ಲಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್​ ಪಕ್ಷ ಮಾಡಿದ ಆಸ್ತಿ ಮಾರಿದ್ದು ಬಿಟ್ಟರೆ ಭಾರತೀಯ ಜನತಾ ಪಾರ್ಟಿ ಈ ಏಳು ವರ್ಷದಲ್ಲಿ ಏನು ಕಡಿದುಕಟ್ಟೆ ಹಾಕಿದೆ ಎಂದು ಬಿಜಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ, ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ನನ್ನ ಸಹೋದರ, ಹೀಗಾಗಿ ಅವನಿಗೊಂದು ಅವಕಾಶ ಕೊಡಿ ಎಂದು ಹೆಬ್ಬಾಳ್ಕರ್ ಮನವಿ ಮಾಡಿಕೊಂಡರು.

laxmi-hebbalkar-slams-bjp
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​

By

Published : Nov 30, 2021, 8:22 AM IST

ಚಿಕ್ಕೋಡಿ: ಬಿಜೆಪಿ ಪಕ್ಷ ಏಳು ವರ್ಷದಲ್ಲಿ ಎಷ್ಟು ಕಡಿದುಕಟ್ಟೆ ಹಾಕಿದ್ದಾರೆ ಅನ್ನೋದನ್ನ ನೋಡಿದ್ದೇವೆ. ಕಾಂಗ್ರೆಸ್ ಪಕ್ಷ ಮಾಡಿಟ್ಟ ಆಸ್ತಿ ಮಾರೋದೇ ಬಿಜೆಪಿ ಅಭಿವೃದ್ಧಿ ಕಾರ್ಯವಾಗಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಬಿಜೆಪಿ ವಿರುದ್ಧ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ವಾಗ್ದಾಳಿ

Belagavi council election : ತಾಲೂಕಿನ ಯಕ್ಸಂಬಾದಲ್ಲಿ ಆಯೋಜಿಸಲಾಗಿದ್ದ ವಿಧಾನ ಪರಿಷತ್​​ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಮಯದ ಕೊರತೆ, ಅಭಾವದಿಂದಾಗಿ ಮನೆ‌ಮನೆಗೆ ಬಂದುಪ್ರಚಾರ ಮಾಡಲು ಆಗುತ್ತಿಲ್ಲ. ಹೀಗಾಗಿ ನಿಮ್ಮ ವಿನಂತಿಗೆ ಚಿಕ್ಕೋಡಿಗೆ ಬಂದಿದ್ದೇನೆ.

ಚುನಾಯಿತ ಎಲ್ಲ ಪ್ರತಿನಿಧಿಗಳು ನಮಗೆ ಬೆಂಬಲಿಸಬೇಕು. ಕಳೆದ ಇಪ್ಪತ್ತು ದಿನಗಳಿಂದ ನಡೆಯುತ್ತಿರುವ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ನನ್ನ ಸಹೋದರ, ಹೀಗಾಗಿ ಅವನಿಗೊಂದು ಅವಕಾಶ ಕೊಡಿ ಎಂದು ಹೆಬ್ಬಾಳ್ಕರ್ ಮನವಿ ಮಾಡಿಕೊಂಡರು.

ಬಿಜೆಪಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್​​​ ಹೇಳಿಕೆ : ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸ. ದೇಶ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ತ್ಯಾಗ ಬಲಿದಾನವಿದೆ. ಪ್ರಬುದ್ಧ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ. ಬಿಜೆಪಿಯವರು ಬರಿ ದೊಡ್ಡ ಭಾಷಣವನ್ನೇ ಮಾಡ್ತಾರೆ. ಆದರೆ, ಏಳು ವರ್ಷದಲ್ಲಿ ಎಷ್ಟು ಕಡಿದು ಕಟ್ಟೆ ಹಾಕಿದ್ದಾರೆ ಅನ್ನೋದನ್ನ ನೋಡಿದ್ದೇವೆ. ಕಾಂಗ್ರೆಸ್ ಪಕ್ಷ ಮಾಡಿಟ್ಟ ಆಸ್ತಿಯನ್ನ ಮಾರೋದೆ ಬಿಜೆಪಿಯ ಅಭಿವೃದ್ಧಿ ಕಾರ್ಯವಾಗಿದೆ. ಸರ್ಕಾರಿ ಆಸ್ತಿಗಳನ್ನ 'ಹಮ್ ದೋ ಹಮಾರೆ ದೋ' ಅಂದುಕೊಂಡು ದೇಶದ ಆಸ್ತಿಯನ್ನ ಅಂಬಾನಿ, ಅದಾನಿಗೆ ಮಾರೊದೊಂದೆ ಬಿಜೆಪಿಯ ಉದ್ಯೋಗ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನು ಓದಿ-ಹಾವೇರಿಯಲ್ಲಿ ದನ ಬೆದರಿಸುವ ಸ್ಪರ್ಧೆ: ವ್ಯಕ್ತಿಯನ್ನು ಮೇಲಕ್ಕೆತ್ತಿ ಎಸೆದ ಹೋರಿ.. VIDEO

ಹೀಗಾಗಿ ಚಿಕ್ಕೋಡಿ - ಸದಲಗಾ ಕ್ಷೇತ್ರದ ಮತದಾರರ ‌ಒಂದೊಂದು‌ ಮತವೂ ಮುಖ್ಯವಾಗಿದೆ. ಸಹೋದರ ಚೆನ್ನರಾಜ್ ಹಟ್ಟಿಹೊಳಿ ಅವರಿಗೆ ಮೊದಲ‌ ಪ್ರಾಸಶ್ಯ್ತದ ಮತವನ್ನು ಕೊಡುವ ಮೂಲಕ ನಿಮ್ಮ ಸೇವೆ ಮಾಡಲು ಸಹೋದರನಿಗೊಂದು ಅವಕಾಶ ಕೊಡಿ ಎಂದು ಮತದಾರರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಮಾಡಿಕೊಂಡರು.

ABOUT THE AUTHOR

...view details