ಬೆಳಗಾವಿ: ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಕಾರಣಕ್ಕೆ ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯ ಲಾಲ್ ಶಿರಚ್ಛೇದ ಮಾಡಿದ ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು. ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆ ತಪ್ಪಾಗಿತ್ತು. ಹಾಗಂತ ದುಷ್ಕರ್ಮಿಗಳು ಟೈಲರ್ ಹತ್ಯೆ ಮಾಡಿದ್ದನ್ನು ನಾನು ಖಂಡಿಸುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಮುಂದಿನ ದಿನಗಳಲ್ಲಿ ಭದ್ರತೆ ಇಲ್ಲ ಅಂತಾ ನಮಗೆಲ್ಲ ಅನಿಸುತ್ತಿದೆ. ಜನರಿಂದ ಆರಿಸಿ ಹೋದ ಸರ್ಕಾರವೇ ಈ ರೀತಿ ಅಭದ್ರ ಆದರೆ ಚುನಾವಣೆ ಏಕೆ ಮಾಡಬೇಕು? ಎಂದರು.
ಒಮ್ಮೆಲೇ35 ರಿಂದ 40 ಜನ ಗೆದ್ದು ಎಂಎಲ್‌ಎಗಳನ್ನು ಕರೆದುಕೊಂಡು ಹೋಗಿ ಬಿಟ್ರೆ ಎಲ್ಲಾದರೂ ತಡಿಯಕ್ಕಾಗುತ್ತಾ?. ಅದಲ್ಲದೇ ಅವರಿಗೆ ಹಣಕಾಸು, ನಗರಾಭಿವೃದ್ಧಿ, ಇಂಧನ ಖಾತೆ, ಗೃಹ ಖಾತೆಯ ಆಸೆ ತೋರಿಸಲಾಗುತ್ತಿದೆ. ಹಿಂದೆ ಕೇಂದ್ರದಲ್ಲಿ ಒಂದು ವೋಟ್ನಿಂದ ಸರ್ಕಾರ ಬೀಳುತ್ತಿದ್ದರೂ ವಾಜಪೇಯಿಯವರು ಅನ್ಯ ಮಾರ್ಗ ಅನುಸರಿಸಿರಲಿಲ್ಲ. ಅಂತಹವರು ಕಟ್ಟಿದ ಬಿಜೆಪಿ ಇಂದು ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದರು.
ಕನ್ಹಯ್ಯ ಲಾಲ್ ಶಿರಚ್ಛೇದ ಮಾಡಿದ ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ತಿಳಿಯುವುದಿಲ್ಲವಾ?: ಶಿವಸೇನಾ ವಕ್ತಾರ ಸಂಜಯ್ ರಾವುತ್‌ಗೆ ಇಡಿ ಬುಲಾವ್ ವಿಚಾರಕ್ಕೆ ಪ್ರತಿಕ್ರಿಯಿಸಿ ಶಾಸಕಿ ಹೆಬ್ಬಾಳ್ಕರ್, ಅಲ್ಲಿ ನಡೆಯುತ್ತಿರುವ ರಾಜಿಕೀಯ ಬೆಳವಣಿಗೆ ನೋಡಿದಾಗಲೇ ಇಡಿ ಬುಲಾವ್ ಮಾಡಿರುವುದು ರಾಜಕೀಯ ಪ್ರೇರಿತ ಎಂದು ತಿಳಿದು ಬರುತ್ತದೆ. ಆದರೆ ಬಿಜೆಪಿಯವರು ನಾವಲ್ಲ ಎಂದು ಹೇಳುತ್ತಿದ್ದಾರೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ತಿಳಿಯುವುದಿಲ್ಲವಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ರಾಜಸ್ಥಾನ ಟೈಲರ್ ಶಿರಚ್ಛೇದ.. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪೈಶಾಚಿಕ ಕೃತ್ಯ ಎಂದ ಹೆಚ್ಡಿಕೆ