ಕರ್ನಾಟಕ

karnataka

ETV Bharat / city

ಬೆಳಗಾವಿ ಸ್ಮಾರ್ಟ್​ಸಿಟಿ ಯೋಜನೆ ಸಂಪೂರ್ಣ ಫೇಲ್ಯೂರ್: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಸ್ಮಾರ್ಟ್​ಸಿಟಿ ಅಂದ್ರೆ ಮೈಸೂರು, ಬೆಂಗಳೂರು ಹೇಗೆ ನಮ್ಮ ಕಣ್ಣಿಗೆ ಕಾಣುತ್ತವೆಯೋ ಆ ರೀತಿ ಬೆಳಗಾವಿ ಕಾಣುತ್ತಿಲ್ಲ. ಸ್ಮಾರ್ಟ್ ಸಿಟಿಯ ಜವಾಬ್ದಾರಿಯನ್ನು ಅಧಿಕಾರಿಗಳು ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ.‌ ಬೆಳಗಾವಿ ಸ್ಮಾರ್ಟ್​ಸಿಟಿ ಸಂಪೂರ್ಣ ಫೇಲ್ಯೂರ್ ಆಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.

Lakshmi Hebbalkar
ಲಕ್ಷ್ಮೀ ಹೆಬ್ಬಾಳ್ಕರ್

By

Published : Jul 19, 2021, 1:48 PM IST

ಬೆಳಗಾವಿ: ಸ್ಮಾರ್ಟ್​ಸಿಟಿ ಸಂಪೂರ್ಣ ಫೇಲ್ಯೂರ್ ಆಗಿದ್ದು, ಕಾಮಗಾರಿಯಲ್ಲಿ ಆಗುತ್ತಿರುವ ಭ್ರಷ್ಟಾಚಾರದಲ್ಲಿ ಯಾವ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ ಎಂಬುದನ್ನು ಚರ್ಚೆ ಮಾಡುವುದಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಸ್ಮಾರ್ಟ್​ಸಿಟಿ ಕಾಮಗಾರಿಯಿಂದ ಸಂಭವಿಸುತ್ತಿರುವ ಸಾವು-ನೋವುಗಳಿಗೆ ಯಾರು ಹೊಣೆ?. ಬೆಳಗಾವಿ ಸ್ಮಾರ್ಟ್​ಸಿಟಿ ಆಗಬೇಕೆಂದು ನಾವೆಲ್ಲ ಇಷ್ಟಪಟ್ಟಿದ್ದೆವು. ಆದ್ರೆ ಸ್ಮಾರ್ಟ್​ಸಿಟಿ‌ ಅಧಿಕಾರಿಗಳು ಹಳೇ ಕಂಬದಲ್ಲಿರುವ ಲೈಟ್​ಗಳನ್ನು ಬದಲಾಯಿಸುವುದನ್ನೇ ‌ದೊಡ್ಡ ಸಾಧನೆ ಎಂದುಕೊಂಡಿದ್ದಾರೆ. ಸರಿಯಾಗಿ ಗುಂಡಿಗಳನ್ನು ಮುಚ್ಚುತ್ತಿಲ್ಲ. ರಸ್ತೆ ಕಾಮಗಾರಿ ಗುಣಮಟ್ಟ ಚೆನ್ನಾಗಿಲ್ಲ ಎಂದು ಆರೋಪಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಸ್ಮಾರ್ಟ್​ಸಿಟಿ ಅಂದರೆ ಮೈಸೂರು, ಬೆಂಗಳೂರು ಹೇಗೆ ನಮ್ಮ ಕಣ್ಣಿಗೆ ಕಾಣುತ್ತವೆಯೋ ಆ ರೀತಿ ಬೆಳಗಾವಿ ಕಾಣಿಸುತ್ತಿಲ್ಲ. ಸ್ಮಾರ್ಟ್ ಸಿಟಿಯ ಜವಾಬ್ದಾರಿಯನ್ನು ಅಧಿಕಾರಿಗಳು ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ.‌ ಜನಪ್ರತಿನಿಧಿಗಳು ಬೋರ್ಡ್ ಹಾಕಿಕೊಳ್ಳುವುದನ್ನು ಬಿಟ್ಟು ಬೇರೆ ಏನು ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.‌

ಸ್ಮಾರ್ಟ್​ಸಿಟಿ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಯಾವ ಜನಪ್ರತಿ‌ನಿಧಿಗಳು, ಯಾರು ಯಾರು ಭಾಗಿಯಾಗಿದ್ದಾರೆ ಎಂಬುದನ್ನು ನಾನೀಗ ಚರ್ಚೆ ಮಾಡುವುದಿಲ್ಲ. ಆದ್ರೆ ಬೆಳಗಾವಿ ಸ್ಮಾರ್ಟ್ ಸಿಟಿ ಸಂಪೂರ್ಣವಾಗಿ ಫೇಲ್ಯೂರ್ ಆಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details