ಕರ್ನಾಟಕ

karnataka

ETV Bharat / city

ಜಾರಕಿಹೊಳಿ ಸಹೋದರರು ಒಂದೇ ಎಂದ ಅಣ್ಣನ ಮಗನಿಗೆ ಲಖನ್​ ತಿರುಗೇಟು - belagavi athani politicle news

ಗೋಕಾಕ್​ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ‌ನ್ನು ಬೆಂಬಲಿಸಿದ್ದ ಜನತೆಗೆ ಪತ್ರದ ಮೂಲಕ ಸಂತೋಷ ಧನ್ಯವಾದ ತಿಳಿಸಿದ್ದರು. ಜಾರಕಿಹೊಳಿ ಸಹೋದರರು ಒಂದೇ ಎಂದು ಅವರು ಹೇಳಿಕೊಂಡಿದ್ದರು. ಆದ್ರೆ ಸದ್ಯ ಅಣ್ಣನ ಪುತ್ರನ ಪತ್ರಕ್ಕೆ ಕಾಂಗ್ರೆಸ್​ ಪರಾಜಿತ ಅಭ್ಯರ್ತಿ ಲಖನ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

santhosh jarkiholi lakhan jarkiholi
ಸಂತೋಷ ಜಾರಕಿಹೊಳಿ ಲಖನ್ ಜಾರಕಿಹೊಳಿ

By

Published : Dec 13, 2019, 5:08 PM IST

ಬೆಳಗಾವಿ: ಜಾರಕಿಹೊಳಿ ಸಹೋದರರು ಎಲ್ಲರೂ ಒಂದೇ ಎಂಬ ರಮೇಶ್ ಜಾರಕಿಹೊಳಿ ಪುತ್ರನ ಪತ್ರಕ್ಕೆ ಲಖನ್​ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಉಪಚುನಾವಣೆ ಮುಗಿದರೂ ಗೋಕಾಕ ಕ್ಷೇತ್ರದ ಜನರಿನ್ನೂ ಗೊಂದಲದಲ್ಲಿದ್ದಾರೆ. ಜಾರಕಿಹೊಳಿ ಸಹೋದರರು ಒಂದೇ ಎಂದು ಪತ್ರವೊಂದರಲ್ಲಿ ರಮೇಶ ‌ಜಾರಕೊಹೊಳಿ ಪುತ್ರ ಸಂತೋಷ್ ಹೇಳಿಕೊಂಡಿದ್ದರು. ಸದ್ಯ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂತೋಷ ಜಾರಕಿಹೊಳಿ ಪೊಸ್ಟರ್

ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ‌ನ್ನು ಬೆಂಬಲಿಸಿದ್ದ ಜನತೆಗೆ ಪತ್ರದ ಮೂಲಕ ಸಂತೋಷ ಧನ್ಯವಾದ ತಿಳಿಸಿದ್ದರು. ಜಾರಕಿಹೊಳಿ ಸಹೋದರರು ಒಂದೇ ಎಂದು ಅವರು ಹೇಳಿಕೊಂಡಿದ್ದರು. ಆದ್ರೆ ಸದ್ಯ ಅಣ್ಣನ ಪುತ್ರನ ಪತ್ರಕ್ಕೆ ಕಾಂಗ್ರೆಸ್​ ಪರಾಜಿತ ಅಭ್ಯರ್ತಿ ಲಖನ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಲಖನ್ ಜಾರಕಿಹೊಳಿ ಪೊಸ್ಟರ್

ಜಾರಕಿಹೊಳಿ‌ ಸಹೋದರರು ಒಂದೇ ಅಲ್ಲ. ಸಂತೋಷ ಅವರು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಅವರ ಮಾತಿಗೆ ಯಾರೂ ಕಿವಿಗೊಡದಂತೆ ಮನವಿ ಮಾಡಿ ತಿರುಗೇಟು ನೀಡಿದ ಪೊಸ್ಟರ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ABOUT THE AUTHOR

...view details