ಕರ್ನಾಟಕ

karnataka

ETV Bharat / city

ವ್ಯಾಪಾರಿಗಳಿಂದ ಹಣ ವಸೂಲಿ ಮಾಡ್ತಿದ್ದ ಕೆಎಸ್​​ಆರ್​ಪಿ ಪೇದೆ ಅರೆಸ್ಟ್ - ಕೆಎಸ್​ಆರ್​ಪಿ ಪೇದೆ

ಬೆದರಿಕೆ ಹಾಕಿ ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಕೆಎಸ್​ಆರ್​ಪಿ ಪೇದೆಯನ್ನು ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಕೆಎಸ್​ಆರ್​ಪಿ ಪೇದೆಯಾಗಿದ್ರೂ ಸಿವಿಲ್ ಡ್ರೆಸ್ ಹಾಕಿ ಕ್ರೈಮ್ ಬ್ರ್ಯಾಂಚ್ ಪೊಲೀಸ್ ಅಂತ ಪೋಸ್ ಕೊಡ್ತಿದ್ದ ಆಸಾಮಿ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಸ್ಥರನ್ನು ಬೆದರಿಸಿ ಅವರ ಬಳಿ ಹಣ ವಸೂಲಿ ಮಾಡುತ್ತಿದ್ದ..

ksrp-constable-arrested-by-belagavi-market-police
ಕೆಎಸ್​​ಆರ್​ಪಿ ಪೇದೆ ಅರೆಸ್ಟ್

By

Published : Jun 11, 2021, 10:12 AM IST

ಬೆಳಗಾವಿ :ಲಾಕ್‌ಡೌನ್ ಸಂದರ್ಭದಲ್ಲಿ ಬೆದರಿಕೆ ಹಾಕಿ ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಕೆಎಸ್​ಆರ್​ಪಿ ಪೇದೆಯನ್ನು ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಕೆಎಸ್​ಆರ್​ಪಿ ಪೇದೆಯಾಗಿದ್ರೂ ಸಿವಿಲ್ ಡ್ರೆಸ್ ಹಾಕಿ ಕ್ರೈಮ್ ಬ್ರ್ಯಾಂಚ್ ಪೊಲೀಸ್ ಅಂತ ಪೋಸ್ ಕೊಡ್ತಿದ್ದ ಆಸಾಮಿ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಸ್ಥರನ್ನು ಬೆದರಿಸಿ ಅವರ ಬಳಿ ಹಣ ವಸೂಲಿ ಮಾಡುತ್ತಿದ್ದ.

ವ್ಯಾಪಾರಿಗಳಿಂದ ಹಣ ವಸೂಲಿ ಮಾಡ್ತಿದ್ದ ಕೆಎಸ್​​ಆರ್​ಪಿ ಪೇದೆ ಅರೆಸ್ಟ್

ನಗರದ ಕೆಎಸ್‌ಆರ್‌ಪಿ 2ನೇ ಬಟಾಲಿಯನ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ಧಾರೂಢ ವಡ್ಡರ್ ಬಂಧಿತ ಆರೋಪಿ. ಲಾಕ್‌ಡೌನ್ ಸಂದರ್ಭದಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಸ್ಥರನ್ನು ಬೆದರಿಸಿ ಅವರ ಬಳಿ ಹಣ ವಸೂಲಿ ಮಾಡುತ್ತಿದ್ದ.

ಈ ಬಗ್ಗೆ‌ ಸಂಶಯಗೊಂಡ ವ್ಯಾಪಾರಸ್ಥರು ಆತನನ್ನು ಹಿಡಿದು ಪ್ರಶ್ನಿಸಿದಾಗ ನಿಜಾಂಶ ಬಯಲಾಗಿದೆ. ಸ್ವತಃ ಸಾರ್ವಜನಿಕರೇ ​ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details