ಚಿಕ್ಕೋಡಿ:ಶಾಲಾ ಮಕ್ಕಳಿಗೆ ನೀಡಬೇಕಿದ್ದ ಕ್ಷೀರ ಭಾಗ್ಯ (Ksheera Bhagya) ಯೋಜನೆಯ ಹಾಲಿನ ಪುಡಿ (Milk Powder) ಪ್ಯಾಕೇಟ್ಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರಾಯಭಾಗ ಪೊಲೀಸರು ಬಂಧಿಸಿದ್ದಾರೆ.
ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ ಸಾಗಣೆ ಬೆಳಗಾವಿ ಜಿಲ್ಲೆಯ ಬಾವನಸೌದತ್ತಿ ಗ್ರಾಮದ ರಾಜುಗೌಡ ಪಾಟೀಲ್, ಹಾಗೂ ಸುನೀಲ್ ಗೂರವ ಬಂಧಿತ ಆರೋಪಿಗಳು. ಇವರು ಬೇಕರಿ ಶಾಪ್ ಇಟ್ಟುಕೊಂಡಿದ್ದು, ಉತ್ಪನ್ನಗಳ ತಯಾರಿಕೆಗಾಗಿ ಮಕ್ಕಳಿಗೆ ತಲುಪಬೇಕಿದ್ದ ಹಾಲಿನ ಪುಡಿ (Milk Powder) ಪ್ಯಾಕೇಟ್ಗಳನ್ನು ಅಕ್ರಮವಾಗಿ ತೆಗೆದುಕೊಂಡು ಹೋಗುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ರಾಯಬಾಗ ಪೊಲೀಸರು ದಾಳಿ ನಡೆಸಿ ಬಾವನಸೌದತ್ತಿ ಗ್ರಾಮದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 11 ಕೆ.ಜಿ ತೂಕದ 20ಕ್ಕೂ ಹೆಚ್ಚು ಹಾಲಿನ ಪುಡಿ ಬ್ಯಾಗ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಕ್ಷೀರ ಭಾಗ್ಯ (Ksheera Bhagya)ಯೋಜನೆ ಹಾಲಿನ ಪುಡಿ ಅಕ್ರಮ ಸಾಗಣೆಯಲ್ಲಿ ಇನ್ನೂ ಯಾರಿದ್ದಾರೆ ಎಂಬುವುದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಸಂಬಂಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.