ಕರ್ನಾಟಕ

karnataka

By

Published : Dec 24, 2019, 11:01 PM IST

ETV Bharat / city

ಸೇತುವೆ ಮೇಲಿನ ಮಣ್ಣು ಕೃಷ್ಣಾ ನದಿಗೆ: ಸಾಮಾಜಿಕ ಕಾರ್ಯಕರ್ತ ಆಕ್ರೋಶ

ಕೃಷ್ಣಾ ನದಿಯ ಸೇತುವೆಯ ಮೇಲಿನ ಮಣ್ಣನ್ನು ಸ್ವಚ್ಛ ಮಾಡಿ ಬೇರೆಡೆಗೆ ಹಾಕದೆ ನದಿಯ ನೀರಿಗೆ ಸುರಿದು ಕಲುಷಿತಗೊಳಿಸುತ್ತಿದ್ದಾರೆಂದು ಸಾಮಾಜಿಕ ಹೋರಾಟಗಾರರೊಬ್ಬರು ಆರೋಪಿಸಿರುವ ಘಟನೆ ನಡೆದಿದೆ.

KN_CKD_4_krishna_nadi_niru_kalushita_script_KA10023
ಕೃಷ್ಣಾ ನದಿ ಕಲುಷಿತ, ಸಾಮಾಜಿಕ ಕಾರ್ಯಕರ್ತನಿಂದ ಗುತ್ತಿಗೆದಾರನ ಬಣ್ಣ ಬಯಲು

ಚಿಕ್ಕೋಡಿ:ಕೃಷ್ಣಾ ನದಿಯ ಸೇತುವೆಯ ಮೇಲಿನ ಮಣ್ಣನ್ನು ಸ್ವಚ್ಛ ಮಾಡಿ ಬೇರೆಡೆಗೆ ಹಾಕದೆ ನದಿಯ ನೀರಿಗೆ ಸುರಿದು ಕಲುಷಿತಗೊಳಿಸುತ್ತಿದ್ದಾರೆಂದು ಸಾಮಾಜಿಕ ಹೋರಾಟಗಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷ್ಣಾ ನದಿಗೆ ಸೇತುವೆ ಮೇಲಿನ ಮಣ್ಣು

ಬೆಳಗಾವಿ‌ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಕೃಷ್ಣಾ ನದಿ ಈ ಭಾಗದ ಜೀವನಾಡಿ. ಸೇತುವೆ ಮೇಲೆ ಬಿದ್ದಿರುವ ಮಣ್ಣನ್ನು ಸ್ವಚ್ಛ ಮಾಡಿ ಆ ಮಣ್ಣನ್ನು ನದಿಗೆ ಹಾಕುತ್ತಿರುವುದರಿಂದ ನದಿ ನೀರು ಕಲುಷಿತವಾಗುತ್ತಿದೆ. ಅಲ್ಲದೇ ಗುತ್ತಿಗೆದಾರ ಕೇವಲ ಒಬ್ಬ ವೃದ್ಧ ಕಾರ್ಮಿಕನಿಂದ ಕೆಲಸ ಮಾಡಿಸುತ್ತಿದ್ದು, ಈ ಕೆಲಸ ಕಾಟಾಚಾರಕ್ಕೆ ಮಾತ್ರ ನಡೆದಿದೆ ಎಂಬುದು ಮೆಲ್ನೋಟಕ್ಕೆ ಕಾಣುತ್ತದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆಗೆ ಗಮನ ಹರಿಸಿ ಸ್ವಚ್ಛಗೊಳಿಸಿದ ಮಣ್ಣನ್ನು ಬೇರೆಡೆಗೆ ಸಾಗಿಸಿ ನದಿಯ ನೀರಿನ ನೈರ್ಮಲ್ಯವನ್ನು ಕಾಯುವ ಅವಶ್ಯಕತೆ ಇದೆ ಎಂದು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಹುಕ್ಕೇರಿ ಆಗ್ರಹಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details