ಕರ್ನಾಟಕ

karnataka

ETV Bharat / city

ಬೆಳಗಾವಿಗೆ ಆಗಮಿಸಿದ್ದ ಕೊಲ್ಹಾಪುರ ಜಿಲ್ಲಾ ಪಂಚಾಯತ್​ ಸದಸ್ಯರಿಗೆ ಪೊಲೀಸ್​ ಬಿಗಿ ಭದ್ರತೆ - ಕೊಲ್ಹಾಪುರ ಜಿಲ್ಲಾ ಪಂಚಾಯತ್​ ಸದಸ್ಯರಿಗೆ ಪೊಲೀಸ್​ ಬಿಗಿ ಭದ್ರತೆ

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲಾ ಪಂಚಾಯತ್​ ಸದಸ್ಯರು ಬೆಳಗಾವಿಗೆ ಆಗಮಿಸಿದಾಗ ಪೊಲೀಸರು ಅವರಿಗೆ ಬಿಗಿ ಭದ್ರತೆ ಕಲ್ಪಿಸಿದ್ದರು.

Kolhapur District Panchayat Members
ಬೆಳಗಾವಿಗೆ ಆಗಮಿಸಿದ ಕೊಲ್ಹಾಪುರ ಜಿಲ್ಲಾ ಪಂಚಾಯತ್​ ಸದಸ್ಯರು

By

Published : Jan 2, 2020, 12:20 PM IST

ಬೆಳಗಾವಿ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲಾ ಪಂಚಾಯತ್​ ಸದಸ್ಯರು ಬೆಳಗಾವಿಗೆ ಆಗಮಿಸಿದಾಗ ಪೊಲೀಸರು ಅವರಿಗೆ ಬಿಗಿ ಭದ್ರತೆ ಕಲ್ಪಿಸಿದರು.

ಬೆಳಗಾವಿಗೆ ಕೊಲ್ಹಾಪುರ ಜಿಲ್ಲಾ ಪಂಚಾಯತ್​ ಸದಸ್ಯರು ಭೇಟಿ

ಇಂದು ಕೊಲ್ಹಾಪುರ ಜಿ‌.ಪಂ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಇರುವ ಹಿನ್ನೆಲೆ ಸದಸ್ಯರನ್ನು ಬಿಜೆಪಿ ಆಪರೇಷನ್​ ಮಾಡಬಹುದೆಂಬ ಉದ್ದೇಶದಿಂದ ಸಚಿವ ಹಸನ್ ಮುಶ್ರೀಫ್, ಜಿಲ್ಲಾ ಪಂಚಾಯತ್​ ಸದಸ್ಯರನ್ನು ನಿನ್ನೆ ರಾತ್ರಿ ಬೆಳಗಾವಿಗೆ ಕರೆತಂದಿದ್ದರು ಎನ್ನಲಾಗ್ತಿದೆ. ಇಂದು ಕರ್ನಾಟಕ ರಾಜ್ಯ ಸಾರಿಗೆ ಬಸ್​ನಲ್ಲಿ ಅವರು ಕೊಲ್ಹಾಪುರಕ್ಕೆ ಪ್ರಯಾಣ ಬೆಳೆಸಿದರು. ಈ ವೇಳೆ ಪೊಲೀಸರು ಅವರಿಗೆ ಭದ್ರತೆ ಒದಗಿಸಿದ್ದಾರೆ.

ಈಗಾಗಲೇ ಗಡಿ ವಿಚಾರವಾಗಿ ಮಹಾರಾಷ್ಟ್ರದ ವಿರುದ್ಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್​ ಸದಸ್ಯರು ಗಡಿ ಜಿಲ್ಲೆಗೆ ಬಂದು ಹೋಗಿದ್ದು, ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

For All Latest Updates

ABOUT THE AUTHOR

...view details