ಅಥಣಿ :ನಾಳೆಯಿಂದ ಗಡಿನಾಡು ಕೋಕಟನೂರ ಯಲ್ಲಮ್ಮ ದೇವಿಯ ಜಾತ್ರೆ ಹಿನ್ನೆಲೆ ಬಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜನವರಿ 9 ರಿಂದ 14ರವರೆಗೆ ಯಲ್ಲಮ್ಮವಾಡಿ ಯಲ್ಲಮ್ಮ ದೇವಿಯ ಜಾತ್ರೆ ಅದ್ದೂರಿಯಾಗಿ ನಡೆಯಬೇಕಿತ್ತು.
ಆದರೆ, ಕೊರೊನಾ ಹಿನ್ನೆಲೆ ನಡೆದಿರಲಿಲ್ಲ. ಸದ್ಯ ಜಾತ್ರೆ ರದ್ದುಗೊಳಿಸಿ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ಯಲ್ಲಮ್ಮವಾಡಿ ಗ್ರಾಮಕ್ಕೆ ಅಂತರಾಜ್ಯ ಭಕ್ತರ ಆಗಮನ ತಡೆಯಲು 1 ಡಿವೈಎಸ್ಪಿ, 2 ಸಿಪಿಐ, 10 ಪಿಎಸ್ಐ, ಹಾಗೂ 200 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ.
ತಾಲೂಕಿಗೆ ಸಂಪರ್ಕ ಕಲ್ಪಿಸುವ ಸುತ್ತಮುತ್ತ ರಸ್ತೆಗಳ 9 ಕಡೆ ಚೆಕ್ ಪೋಸ್ಟ್ ಹಾಗೂ ಯಲ್ಲಮ್ಮವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ 12 ಕಡೆ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಒಟ್ಟು 21 ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಮಹಾರಾಷ್ಟ್ರ ಮತ್ತು ಅಂತರ ಜಿಲ್ಲೆಯ ಭಕ್ತಾದಿಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ್ ಮಾಹಿತಿ ನೀಡಿದರು.