ಬೆಳಗಾವಿ:ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ 48 ವರ್ಷದ ಮಹಿಳೆ ಕಿಡ್ನಿಯನ್ನು ಧಾರವಾಡದಿಂದ ಜೀರೋ ಟ್ರಾಫಿಕ್ನಲ್ಲಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ರವಾನಿಸಲಾಗಿದ್ದು, 6 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ 52 ವರ್ಷದ ವ್ಯಕ್ತಿಗೆ ಕಿಡ್ನಿ ಕಸಿ ಮಾಡಲಾಗುತ್ತಿದೆ.
ಜೀರೋ ಟ್ರಾಫಿಕ್ನಲ್ಲಿ ಬೆಳಗಾವಿ ಕೆಇಎಲ್ ಆಸ್ಪತ್ರೆಗೆ ಕಿಡ್ನಿ ರವಾನೆ - ಬೆಳಗಾವಿ ಕೆಇಎಲ್ ಆಸ್ಪತ್ರೆ
ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದ ಮಹಿಳೆಯ ಕಿಡ್ನಿಯನ್ನು ಜೀರೋ ಟ್ರಾಫಿಕ್ನಲ್ಲಿ ಬೆಳಗಾವಿ ಕೆಇಎಲ್ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ 6 ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಅದನ್ನು ಕಸಿ ಮಾಡಲಾಗುತ್ತಿದೆ.
![ಜೀರೋ ಟ್ರಾಫಿಕ್ನಲ್ಲಿ ಬೆಳಗಾವಿ ಕೆಇಎಲ್ ಆಸ್ಪತ್ರೆಗೆ ಕಿಡ್ನಿ ರವಾನೆ Kidney transfered to Belgavi KEL hospital in zero traffic](https://etvbharatimages.akamaized.net/etvbharat/prod-images/768-512-15820933-thumbnail-3x2-kidney.jpg)
ಜೀರೋ ಟ್ರಾಫಿಕ್ನಲ್ಲಿ ಬೆಳಗಾವಿ ಕೆಇಎಲ್ ಆಸ್ಪತ್ರೆಗೆ ಕಿಡ್ನಿ ರವಾನೆ
ಜೀರೋ ಟ್ರಾಫಿಕ್ನಲ್ಲಿ ಬೆಳಗಾವಿ ಕೆಇಎಲ್ ಆಸ್ಪತ್ರೆಗೆ ಕಿಡ್ನಿ ರವಾನೆ
ಗಂಭೀರವಾಗಿ ಗಾಯಗೊಂಡಿದ್ದ ಧಾರವಾಡದ ಮಹಿಳೆ ಮೆದುಳು ನಿಷ್ಕ್ರಿಯಗೊಂಡು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದ ಕಾರಣ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದ್ದರು. ಬೆಳಗಾವಿ ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದು, ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಪೊಲೀಸ್ ಬೆಂಗಾವಲು ವಾಹನದೊಂದಿಗೆ ಆ್ಯಂಬುಲೆನ್ಸ್‌ನಲ್ಲಿ ಮಹಿಳೆಯ ಕಿಡ್ನಿ ಬೆಳಗಾವಿಗೆ ರವಾನೆಯಾಗಿದೆ.
ಇದನ್ನೂ ಓದಿ :ಧಾರವಾಡ - ಬೆಳಗಾವಿಗೆ ಜೀರೋ ಟ್ರಾಫಿಕ್.. ಮುಸ್ಲಿಂ ಯುವಕನ ಹೃದಯ ಬಡಿತಕ್ಕೆ ಚಾಲನೆ ನೀಡಿದ ಹಿಂದೂ ಬಾಲಕಿ