ಕರ್ನಾಟಕ

karnataka

ETV Bharat / city

ಬೆಳಗಾವಿಯಲ್ಲಿ ಪಟಾಕಿ ಸಿಡಿದು ಕಿಚ್ಚನ ಅಭಿಮಾನಿ ಕಣ್ಣಿಗೆ ಗಾಯ - Belgavi

ಕಿಚ್ಚನ ಪರ ಘೋಷಣೆ ಕೂಗಿ ಪಟಾಕಿ ಸಿಡಿಸುವ ವೇಳೆ ಕಣ್ಣಿಗೆ ಪಟಾಕಿ ಸಿಡಿದು ಕಿಚ್ಚನ ಅಭಿಮಾನಿಯೊಬ್ಬ ಗಾಯಗೊಂಡಿದ್ದಾನೆ. ಬೆಳಗಾವಿಯ ಸಂತೋಷ ಚಿತ್ರಮಂದಿರ ಎದುರು ಈ ಘಟನೆ ನಡೆದಿದೆ.

belgavi
ಪಟಾಕಿ ಸಿಡಿದು ಕಿಚ್ಚನ ಅಭಿಮಾನಿ ಕಣ್ಣಿಗೆ ಗಾಯ

By

Published : Oct 14, 2021, 3:50 PM IST

ಬೆಳಗಾವಿ:ಕೋಟಿಗೊಬ್ಬ 3 ಸಿನಿಮಾ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸುದೀಪ್​​ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಿಚ್ಚನ ಪರ ಘೋಷಣೆ ಕೂಗಿ ಪಟಾಕಿ ಸಿಡಿಸುವ ವೇಳೆ ಕಣ್ಣಿಗೆ ಪಟಾಕಿ ಸಿಡಿದು ಕಿಚ್ಚನ ಅಭಿಮಾನಿಯೊಬ್ಬ ಗಾಯಗೊಂಡಿದ್ದಾನೆ.

ಗಾಯಗೊಂಡ ಅಭಿಮಾನಿ

ಬೆಳಗಾವಿಯ ಸಂತೋಷ ಚಿತ್ರಮಂದಿರ ಎದುರು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಬೆಳಗ್ಗೆ 10.30ರ ಶೋ ರದ್ದಾದ ಹಿನ್ನೆಲೆಯಲ್ಲಿ ಚಿತ್ರಮಂದಿರದ ಎದುರು ಫ್ಯಾನ್ಸ್​ ದೌಡಾಯಿಸಿದ್ದರು. ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗುವವರೆಗೆ ಜಾಗ ಬಿಟ್ಟು ಕದಲಲ್ಲ ಎಂದು ಪಟ್ಟು ಹಿಡಿದರು.

ಅಣ್ಣ ಮೆಸೇಜ್ ಹಾಕವ್ನೇ ಫಿಲ್ಮ್ ರಿಲೀಸ್ ಆಗುತ್ತದೆ ಎಂದು ಅಭಿಮಾನಿಗಳು ಚಿತ್ರಮಂದಿರದ ಹೊರಗೆ ಕಾದು ನಿಂತಿದ್ದರು. ಕಿಚ್ಚನ ಪರ ಘೋಷಣೆ ಕೂಗುತ್ತಿದ್ದ ವೇಳೆ ಪಟಾಕಿ ಸಿಡಿದು ಓರ್ವ ಅಭಿಮಾನಿಗೆ ಗಾಯವಾಗಿದೆ. ಕಣ್ಣಿನ ಮೇಲ್ಬಾಗಕ್ಕೆ ಪಟಾಕಿ ಸಿಡಿದಿದ್ದು, ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ:ಕೋಟಿಗೊಬ್ಬ-3 ಬಿಡುಗಡೆ ವಿಳಂಬ: ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಕಿಚ್ಚ ಸುದೀಪ್

ABOUT THE AUTHOR

...view details