ಬೆಳಗಾವಿ:ಇಲ್ಲಿನ ಸುವರ್ಣಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕೆಡಿಸಿ ಸಭೆ ನಡೆಸಲಾಯಿತು.
ಸುವರ್ಣ ಸೌಧದಲ್ಲಿ ಶೆಟ್ಟರ್ ನೇತೃತ್ವದಲ್ಲಿ ಕೆಡಿಪಿ ಸಭೆ... ಹಲವು ಜನಪ್ರತಿನಿಧಿಗಳು ಗೈರು! - belagavi news
ಬೆಳಗಾವಿಯ ಸುವರ್ಣ ಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕೆಡಿಸಿ ಸಭೆ ನಡೆಸಲಾಯಿತು.
ಒಂದೂವರೆ ವರ್ಷದ ಬಳಿಕ ನಡೆದ ಕೆಡಿಸಿ ಸಭೆಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಶ್ರೀಮಂತ ಪಾಟೀಲ್ ಗೈರಾಗಿದ್ದರು. ಪ್ರವಾಹದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಕೆಡಿಪಿ ಸಭೆ ನಡೆಯುತ್ತಿದ್ದು, ಮೈತ್ರಿ ಸರ್ಕಾರ 14 ತಿಂಗಳು ಇದ್ದರೂ ಕೆಡಿಪಿ ಸಭೆ ನಡೆಸಿರಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಕೊನೆಯ ಕೆಡಿಪಿ ಸಭೆ ನಡೆಸಲಾಗಿತ್ತು.
ಆದರೆ, ಸಂತ್ರಸ್ತರು ಸಮಸ್ಯೆಯಲ್ಲಿದ್ದರೂ ಜನಪ್ರತಿನಿಧಿಗಳು ಮಾತ್ರ ಸಭೆಯಿಂದ ದೂರ ಉಳಿದಿದ್ದಾರೆ.