ಕರ್ನಾಟಕ

karnataka

ETV Bharat / city

ವಿಧಾನಸಭಾ ಕಲಾಪದ ಪ್ರಶ್ನೋತ್ತರ ವೇಳೆ ಸದನದಲ್ಲಿ ಶಾಸಕರ ಗೈರು : ಸ್ಪೀಕರ್ ಅಸಮಾಧಾನ - ವಿಧಾನಸಭಾ ಕಲಾಪದ ಪ್ರಶ್ನೋತ್ತರ ವೇಳೆ ಸದನದಲ್ಲಿ ಶಾಸಕರ ಗೈರು

ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಲು ಸದಸ್ಯರ ಹೆಸರನ್ನು ಸ್ಪೀಕರ್ ಕರೆದಾಗ ಆಡಳಿತ- ಪ್ರತಿಪಕ್ಷದ ಬಹುತೇಕ ಶಾಸಕರು ಸದನಕ್ಕೆ ಬಂದಿರಲಿಲ್ಲ..

Assembly session
ಬೆಳಗಾವಿ ಅಧಿವೇಶನ

By

Published : Dec 24, 2021, 11:54 AM IST

ಬೆಂಗಳೂರು/ಬೆಳಗಾವಿ :ಅಧಿವೇಶನದ ಕೊನೆಯ ದಿನವಾದ ಇಂದು (ಶುಕ್ರವಾರ) ಸದಸ್ಯರ ಗೈರಿಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಶ್ನೋತ್ತರ ವೇಳೆ ಪ್ರಶ್ನೆ ಕೇಳಬೇಕಾದ ಶಾಸಕರೇ ಸದನಕ್ಕೆ ಗೈರಾಗಿರುವುದನ್ನು ಗಮನಿಸಿದ ಸ್ಪೀಕರ್, ಇದು ಇಂದಿನ ಪರಿಸ್ಥಿತಿ ಎಂದರು. ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಲು ಸದಸ್ಯರ ಹೆಸರನ್ನು ಸ್ಪೀಕರ್ ಕರೆದಾಗ ಆಡಳಿತ- ಪ್ರತಿಪಕ್ಷದ ಬಹುತೇಕ ಶಾಸಕರು ಸದನಕ್ಕೆ ಬಂದಿರಲಿಲ್ಲ.

ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಕೆ.ಆರ್. ಜಯದೇವ ನಿಧನಕ್ಕೆ ಸ್ಪೀಕರ್ ಅವರು ಸಂತಾಪ ವ್ಯಕ್ತಪಡಿಸಿದರು. ನಂತರ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಮಾತನಾಡಿ, ಪ್ರಶ್ನೋತ್ತರ ಕಲಾಪ ಸಸ್ಪೆಂಡ್ ಮಾಡಿ ಉತ್ತರ ಕರ್ನಾಟಕದ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದರು.

ಈಗ ಕುಳಿತುಕೊಳ್ಳಿ, ನಿಮ್ಮ ರಿಕ್ವೆಸ್ಟ್‌ನ ಪರಿಗಣಿಸಿ ಪ್ರಶ್ನೋತ್ತರ ಮುಗಿದ ಮೇಲೆ ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಕಾಗೇರಿ ಹೇಳಿದರು.

ಇದನ್ನೂ ಓದಿ:ಪರಿಷತ್​ ಕಲಾಪ ಇಂದು ಮುಕ್ತಾಯ : ಏನಾಗಲಿದೆ ಮತಾಂತರ ನಿಷೇಧ ಕಾಯ್ದೆಯ ಭವಿಷ್ಯ?

ABOUT THE AUTHOR

...view details