ಕರ್ನಾಟಕ

karnataka

ETV Bharat / city

ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ: ಮುಂದಿನ ಅಧಿವೇಶನದಲ್ಲಿ 'ಮತಾಂತರ' ವಿಧೇಯಕ ಮಂಡನೆ - ಪರಿಷತ್ ಕಲಾಪದಲ್ಲಿ ನಿವೃತ್ತ ಸದಸ್ಯರ ವಿದಾಯ ಭಾಷಣ

ಸಾಕಷ್ಟು ವಿವಾದ ಸೃಷ್ಟಿಗೆ ಕಾರಣವಾಗಿದ್ದ ಮತಾಂತರ ನಿಷೇಧ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲು ಬಿಜೆಪಿ ತೀರ್ಮಾನಿಸಿದೆ ಎಂದು ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಕಟಿಸಿದ್ದಾರೆ.

karnataka legislative council  adjourned  for sine die
ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ: ಮುಂದಿನ ಅಧಿವೇಶನದಲ್ಲಿ 'ಮತಾಂತರ' ಮಂಡನೆ

By

Published : Dec 24, 2021, 5:29 PM IST

ಬೆಳಗಾವಿ:ಆಡಳಿತ ಪಕ್ಷ ಬಿಜೆಪಿ ಮತಾಂತರ ನಿಷೇಧ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುವ ನಿರ್ಧಾರ ಮಾಡಿದ್ದು, ಈ ನಿರ್ಧಾರವನ್ನು ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಕಟಿಸಿದರು. ಇದೇ ವೇಳೆ ಪ್ರತಿಪಕ್ಷ ಸದಸ್ಯರು ನಿವೃತ್ತ ಸದಸ್ಯರ ವಿದಾಯ ಭಾಷಣ ಮಾಡುವುದಿಲ್ಲ ಎಂದು ವಿವರಿಸಿದರು.

ಈ ಎರಡು ಕಾರಣಕ್ಕೆ ನಾಳೆಗೆ ಕಲಾಪ ವಿಸ್ತರಿಸುವ ಒತ್ತಡ ಪರಿಷತ್​​ನಲ್ಲಿ ಕೇಳಿ ಬಂದಿತ್ತು. ಆದರೆ, ಆಡಳಿತ, ಪ್ರತಿಪಕ್ಷ ಸದಸ್ಯರು ತಮ್ಮ ನಿರ್ಧಾರ ಹಿಂಪಡೆದ ಹಿನ್ನೆಲೆ ಕಲಾಪವನ್ನು ವಿಸ್ತರಿಸದೇ, ಸಭಾಪತಿ ಪೀಠದಲ್ಲಿದ್ದ ಎಂ.ಕೆ. ಪ್ರಾಣೇಶ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಕಲಾಪ ಮುಕ್ತಾಯಕ್ಕೆ ಮುನ್ನ ಆಡಳಿತ ಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿದರು. ಸಭಾಪತಿಗಳು ಕಲಾಪದ ವಿವರ ಸಲ್ಲಿಕೆ ಮಾಡಿದರು. ಸಭಾಪತಿಗಳು ಕಲಾಪ ಮುಂದೂಡಿಕೆಗೆ ಮುನ್ನ ಪ್ರಸ್ತುತ ಅಧಿವೇಶನ ಹತ್ತು ದಿನಗಳ ಕಾಲ ಜರುಗಿದೆ. ಕಲಾಪ 52 ಗಂಟೆ 56 ನಿಮಿಷಗಳ ಕಾಲ ‌ನಡೆದಿದೆ ಎಂಬ ವಿವರ ಒದಗಿಸಿದರು.

ಸದಸ್ಯರ ಸಹಕಾರ ನೆನೆದ ಎಸ್​ಆರ್​ ಪಾಟೀಲ್

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ತಮ್ಮ ವಿದಾಯ ಭಾಷಣದಲ್ಲಿ 24 ವರ್ಷದ ಪರಿಷತ್ ಅನುಭವ, ಇದುವರೆಗೂ ಸಚಿವರಾಗಿ ಸಹಕಾರ ನೀಡಿದವರು, ಸರ್ವಪಕ್ಷದ ಸದಸ್ಯರ ಸಹಕಾರ ನೆನೆದರು. ಜೆ.ಹೆಚ್.ಪಟೇಲ್​ರಂತಹ ಹಳ್ಳಿ ಜೀನಿಯಸ್ ನೋಡಿದ್ದೇನೆ. ಬೊಮ್ಮಾಯಿ ಅವರನ್ನು ನೋಡಿದೆ. ಕೋಟಾ ಶ್ರೀನಿವಾಸ್ ಪೂಜಾರಿ ಅವರು ನಮ್ಮೆಲ್ಲರಿಗೂ ಮಾದರಿ. ಒಂದು ಪೈಸೆ ಖರ್ಚು ಮಾಡದೇ ಗೆದ್ದು ಬಂದಿದ್ದಾರೆ. ಅವರು ಗೆದ್ದದ್ದು ನನಗೆ ಖುಷಿ ತಂದಿದೆ. ನಾನು ಗೆದ್ದಿದ್ದರೂ ಅಷ್ಟು ಖುಷಿ ಪಡುತ್ತಿರಲಿಲ್ಲ ಎಂದು ಹೇಳಿದರು.

ಇದರ ಜೊತೆಗೆ ಎಂ.ಸಿ.ನಾಣಯ್ಯ ಅವರ ಬಗ್ಗೆ ಮಾತಾಡಲು ನನ್ನ ಬಳಿ ಪದಗಳಿಲ್ಲ. ಎಲ್ಲರಿಗೂ ಧನ್ಯವಾದಗಳು. ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರಿಗೆ ವಿಶೇಷ ಕೃತಜ್ಞತೆ. ಸಿಎಂ ಬಸವರಾಜ್ ಬೊಮ್ಮಾಯಿ ಯಶಸ್ವಿಯಾಗಿ ಸದನವನ್ನು ನಡೆಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಜನ ಸಂತೋಷ ಪಟ್ಟಿದ್ದಾರೆ. ಬಸವರಾಜ್ ಹೊರಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಂತೋಷದಿಂದ ಈ ಮನೆಯಿಂದ ಹೋಗಬೇಕು ಅಂದುಕೊಂಡಿದ್ದೆ. ಆದರೆ ಕೆಲವು ಚರ್ಚೆಯಿಂದ ಮಾತಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಎಸ್​ಆರ್​ ಪಾಟೀಲ್ ಭಾವುಕರಾದರು.

ಇದೇ ವೇಳೆ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ವಿಚಾರ ಚರ್ಚೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದೆವು. ಎಲ್ಲರಿಗೂ ಧನ್ಯವಾದ. 19 ಸದಸ್ಯರು ನಿರ್ಗಮನ ಆಗುತ್ತಿದೆ. 5ನೇ ತಾರೀಕಿನಂದು ಕಾರ್ಯಕ್ರಮ ಇದೆ. ಎಸ್.ಆರ್.ಪಾಟೀಲ್, ಪ್ರತಾಪ್ ಚಂದ್ರ ಶೆಟ್ಟಿ ಅವರಂತಹ ಹಿರಿಯರು ಇದ್ದಾರೆ. ಈ ಮಹನೀಯರು ಮತ್ತೆ ಬಂದು ನಮಗೆ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ:ಸುಮ್ಮನೆ ಜಾತ್ರೆ ಮಾಡುವುದಿದ್ದರೆ ಬೆಳಗಾವಿ ಅಧಿವೇಶನದ ಅವಶ್ಯಕತೆ ಇಲ್ಲ: ಬಸನಗೌಡ ಯತ್ನಾಳ್ ಕಿಡಿ

ABOUT THE AUTHOR

...view details