ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿರುವ ಲೋಕೋಪಯೋಗಿ ಕಚೇರಿಗೆ ಬೀಗ ಹಾಕಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಲೋಕೊಪಯೋಗಿ ಇಲಾಖೆಗೆ ಬೀಗ ಜಡಿದು ರಾಯಭಾಗದಲ್ಲಿ ಕರವೇ ಪ್ರತಿಭಟನೆ - ರಾಯಭಾಗದಲ್ಲಿ ಕರವೇ ಪ್ರತಿಭಟನೆ
ರಾಯಭಾಗ ತಾಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
![ಲೋಕೊಪಯೋಗಿ ಇಲಾಖೆಗೆ ಬೀಗ ಜಡಿದು ರಾಯಭಾಗದಲ್ಲಿ ಕರವೇ ಪ್ರತಿಭಟನೆ](https://etvbharatimages.akamaized.net/etvbharat/prod-images/768-512-5039859-thumbnail-3x2-megha.jpg)
ಕರವೇ ಪ್ರತಿಭಟನೆ
ಲೋಕೊಪಯೋಗಿ ಇಲಾಖೆಗೆ ಬೀಗ ಜಡಿದು ರಾಯಭಾಗದಲ್ಲಿ ಕರವೇ ಪ್ರತಿಭಟನೆ
ರಾಯಭಾಗ ತಾಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕರವೇ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ.
ಕಳೆದ 3 ವರ್ಷದಿಂದ ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿಯೂ ಸಹ ನೆನೆಗುದಿಗೆ ಬಿದ್ದಿದೆ. ಹೀಗಾಗಿ ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.