ಕರ್ನಾಟಕ

karnataka

ETV Bharat / city

ಮಾಧುಸ್ವಾಮಿಗೆ ಧನ್ಯವಾದ ಹೇಳಿದ ಕಾಗವಾಡ ಕಾಂಗ್ರೆಸ್​​​ ಅಭ್ಯರ್ಥಿ ರಾಜು ಕಾಗೆ - ಮಾಧುಸ್ವಾಮಿ ಹೇಳಿಕೆ ನನಗೆ ಲಾಭ ತಂದುಕೊಡಲಿದೆ.

ಕಾಗವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ, ಮಾಧುಸ್ವಾಮಿ ಹೇಳಿಕೆ ನನಗೆ ಲಾಭ ತಂದುಕೊಡಲಿದೆ. ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಮಾಧುಸ್ವಾಮಿಗೆ ಧನ್ಯವಾದ ಹೇಳಿದ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ

By

Published : Nov 21, 2019, 1:16 PM IST

ಚಿಕ್ಕೋಡಿ: ಶಾಂತಿ ಸಭೆಯಲ್ಲಿ ಕುರುಬ ಸಮಾಜದ ಕುರಿತು ಮಾತನಾಡಿರುವ ಸಚಿವ ಮಾಧುಸ್ವಾಮಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ವ್ಯಂಗ್ಯವಾಡಿದರು.

ಮಾಧುಸ್ವಾಮಿಗೆ ಧನ್ಯವಾದ ಹೇಳಿದ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ

ಕಾಗವಾಡದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್​ ಅಭ್ಯರ್ಥಿ ರಾಜು ಕಾಗೆ, ಮಾಧುಸ್ವಾಮಿ ಹೇಳಿಕೆ ನನಗೆ ಲಾಭ ತಂದುಕೊಡಲಿದೆ. ಇನ್ನು ನಾನು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಗಂಗಾ ಕಲ್ಯಾಣ ಆಶ್ರಯ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ತಂದಿದ್ದೇನೆ. ನನಗೆ ಮತ ನೀಡಿ ಅಂತಾ ಮತದಾರರನ್ನು ಕೇಳುವ ಅವಶ್ಯಕತೆ ಇಲ್ಲ ಎಂದರು.

ಜನರು ನನ್ನ ಪರ ಮತ ಚಲಾಯಿಸುವ ವಿಶ್ವಾಸ ಇದೆ. ನನ್ನ ಹೆಸರಲ್ಲಿ ಕಾರ್ಖಾನೆ, ವೈನ್ ಶಾಪ್, ಪೆಟ್ರೋಲ್ ಬ್ಯಾಂಕ್ ಬಿಸಿನೆಸ್​ಗಳು ಇಲ್ಲ. ಜನಪರ ಕೆಲಸ ಮಾಡಿದ ತೃಪ್ತಿ ಇದೆ ಎಂದು ರಾಜು ಕಾಗೆ ಹೇಳಿದರು.

ABOUT THE AUTHOR

...view details