ಕರ್ನಾಟಕ

karnataka

ETV Bharat / city

ವಿಶಿಷ್ಟವಾಗಿದೆ ಉತ್ತರ ಕರ್ನಾಟಕದ ಜೋಕುಮಾರಸ್ವಾಮಿ ಹಬ್ಬ - chikkodi

ಗಂಗಾಂಬಿಕಾ ಮತಸ್ಥರ ಮನೆತನದ ಆರಾಧ್ಯ ದೈವನಾಗಿರುವ ಜೋಕುಮಾರ ಸ್ವಾಮಿಯನ್ನು ಏಳು ದಿನಗಳ ಕಾಲ ಪೂಜಿಸಿ, 11ನೇ ದಿನದ ಗಣೇಶ ವಿಸರ್ಜನೆಯ ಮರುದಿನ ವಿದಾಯ ಹೇಳುವ ವಿಶಿಷ್ಟ ಆಚರಣೆ ಉತ್ತರ ಕರ್ನಾಟಕದಲ್ಲಿದೆ.‌

ಉತ್ತರ ಕರ್ನಾಟಕದ ಜೋಕುಮಾರಸ್ವಾಮಿ ಹಬ್ಬ
ಉತ್ತರ ಕರ್ನಾಟಕದ ಜೋಕುಮಾರಸ್ವಾಮಿ ಹಬ್ಬ

By

Published : Aug 31, 2020, 1:26 PM IST

ಚಿಕ್ಕೋಡಿ:ಸಂಪ್ರದಾಯ, ಸಂಸ್ಕ್ರತಿಯ ನೆಲೆವೀಡು ನಮ್ಮದು. ಅನೇಕ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಕೆಲ ಧಾರ್ಮಿಕ ಕಾರ್ಯಕ್ರಮಗಳು ಇಂದಿಗೂ ಚಾಲ್ತಿಯಲ್ಲಿವೆ. ಅವುಗಳಲ್ಲಿ ಜೋಕುಮಾರ ಸ್ವಾಮಿ ಹಬ್ಬ ಕೂಡಾ ಒಂದು. ಗಂಗಾಂಬಿಕಾ ಮತಸ್ಥರ ಮನೆತನದ ಆರಾಧ್ಯ ದೈವನಾಗಿರುವ ಜೋಕುಮಾರ ಸ್ವಾಮಿಯನ್ನು ಏಳು ದಿನಗಳ ಕಾಲ ಪೂಜಿಸಿ, 11ನೇ ದಿನದ ಗಣೇಶ ವಿಸರ್ಜನೆಯ ಮರುದಿನ ವಿದಾಯ ಹೇಳುವ ವಿಶಿಷ್ಟ ಆಚರಣೆ ಉತ್ತರ ಕರ್ನಾಟಕದಲ್ಲಿದೆ.‌

ಚಿಕ್ಕೋಡಿ ಉಪವಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕೂಡಾ ಈ ಪರಂಪರೆ ಚಾಲ್ತಿಯಲ್ಲಿದ್ದು, ಭಾದ್ರಪದ ಅಷ್ಟಮಿಯಂದು ಜೋಕುಮಾರನ ಮೂರ್ತಿಯನ್ನು ಮಣ್ಣಿನಿಂದ ತಯಾರಿಸಿ ಹುಣ್ಣಿಮೆಯವರೆಗೆ ಪೂಜೆ ಮಾಡಲಾಗುತ್ತದೆ.

ಜೋಕುಮಾರನ ಮಣ್ಣಿನ ಮೂರ್ತಿಯನ್ನು ಬುಟ್ಟಿಯಲ್ಲಿ ಬೇವಿನ ಸೊಪ್ಪಿನ ನಡುವೆ ಕುಳ್ಳಿರಿಸಲಾಗುತ್ತದೆ. ಗಂಗಾಂಬಿಕಾ ಮನೆತನದ ಮಹಿಳೆಯರು ಆ ಬುಟ್ಟಿಯನ್ನು ತಲೆಯ ಮೇಲೆ ಹೊತ್ತು ಎಲ್ಲ ಸಮುದಾಯದ ಮನೆಗಳಿಗೂ ಹೋಗಿ ನೈವೇದ್ಯ ಸ್ವೀಕರಿಸುವುದು ಪದ್ಧತಿ.

ಜೋಕುಮಾರ ಕುಂಬಾರ ಮನೆಯಲ್ಲಿ‌ ಜನಿಸಿ ತಳವಾರ ಮನೆಯಲ್ಲಿ ಮೆರೆದಾಡಿ, ಕೇರಿಯವರ ಮನೆಯಲ್ಲಿ ಜಿಗಿದಾಡಿ ಕೊನೆಗೆ ದಾಸರ ಪಡಿಯಲ್ಲಿ ಮರಣ ಹೊಂದುತ್ತಾನೆ ಎಂಬುದು ನಂಬಿಕೆ. ಇದು ತಲತಲಾಂತರದಿಂದ ಆಚರಿಸುತ್ತಾ ಬಂದಿರುವ ಸಂಪ್ರದಾಯವಾಗಿದೆ ಎನ್ನುತ್ತಾರೆ ಸಮುದಾಯದವರು.

ಗಣಪತಿ‌ ಕುಳಿತ ನಾಲ್ಕನೇ ದಿನಕ್ಕೆ ಜೋಕುಮಾರ ಜನಿಸುತ್ತಾನೆ. ನಂತರ ಅವನಿಗೆ ಬೇವಿನ ತಪ್ಪಲದಿಂದ ಸಿಂಗರಿಸಿ ಬುಟ್ಟಿಯಲ್ಲಿಟ್ಟುಕೊಂಡು ಓಣಿ‌ಯಲ್ಲಿರುವ ಮನೆ ಮನೆಗೆ ಹೋಗಿ ಎಣ್ಣೆ, ಬೆಣ್ಣೆ, ಗೋಧಿ, ಜೋಳ, ಸಜ್ಜಿ ವಿವಿಧ ಧಾನ್ಯ ಸೇರಿಸಿ ಪೂಜಾ ಸಾಮಗ್ರಿಗಳನ್ನು ಹಾಗೂ ಹಣವನ್ನು ನೀಡುತ್ತಾರೆ. ಬಂದ ಧಾನ್ಯಗಳಲ್ಲಿ ಕುಂಬಾರರು, ಗಂಗಾ ಜನಾಂಗದವರು ಸೇರಿ ಹಂಚಿಕೊಳ್ಳುತ್ತಾರೆ.

ABOUT THE AUTHOR

...view details