ಬೆಳಗಾವಿ :ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಬೆಳಗಾವಿಯಲ್ಲಿ ಚಾಲನೆ ನೀಡಲಾಯಿತು. ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದ ಮಲಪ್ರಭಾ ಉಗಮ ಸ್ಥಳದಲ್ಲಿ ಜನತಾ ಜಲಧಾರೆಗೆ ಸಂಸದ ಪ್ರಜ್ವಲ್ ರೇವಣ್ಣ ಚಾಲನೆ ನೀಡಿದರು. ಮಲಪ್ರಭೆಗೆ ಪೂಜೆ ಸಲ್ಲಿಸಿದ ಸಂಸದ ಪ್ರಜ್ವಲ್, ಐದು ಬಿಂದಿಗೆ ನೀರು ತುಂಬಿಸಿಕೊಂಡರು. ಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣಗೆ ಸ್ಥಳೀಯ ಜೆಡಿಎಸ್ ಮುಖಂಡರು ಸಾಥ್ ನೀಡಿದರು.
ಜನತಾ ಜಲಧಾರೆಗೆ ಚಾಲನೆ : ಕಣಕುಂಬಿಯಲ್ಲಿ ಮಲಪ್ರಭೆಗೆ ಪೂಜೆ ಸಲ್ಲಿಸಿದ ಸಂಸದ ಪ್ರಜ್ವಲ್ ರೇವಣ್ಣ
ಜೆಡಿಎಸ್ ಕೈಗೊಂಡಿರುವ ಜನತಾ ಜಲಧಾರೆಗೆ ಬೆಳಗಾವಿಯಲ್ಲಿ ಚಾಲನೆ ನೀಡಲಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಮಲಪ್ರಭಾ ನದಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳೀಯ ಜೆಡಿಎಸ್ ಮುಖಂಡರು ಸಾಥ್ ನೀಡಿದರು..
ಕಣಕುಂಬಿಯಲ್ಲಿ ಮಲಪ್ರಭೆಗೆ ಪೂಜೆ ಸಲ್ಲಿಸಿದ ಪ್ರಜ್ವಲ್ ರೇವಣ್ಣ
ಇದಕ್ಕೂ ಮುನ್ನ ಕುಂಭಮೇಳ ಹೊತ್ತ ಮಹಿಳೆಯರು ಪ್ರಜ್ವಲ್ ರೇವಣ್ಣರನ್ನು ಗ್ರಾಮಕ್ಕೆ ಸ್ವಾಗತಿಸಿದರು. ಬಳಿಕ ಕುಂಭಮೇಳದೊಂದಿಗೆ ಪ್ರಜ್ವಲ್ ರೇವಣ್ಣ ಮಲಪ್ರಭೆ ನದಿಯವರೆಗೆ ಪಾದಯಾತ್ರೆ ನಡೆಸಿದರು. ಗ್ರಾಮದ ನೂರಾರು ಮಹಿಳೆಯರು, ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಮಲ್ಲಪ್ರಭಾ ನದಿ ಬಳಿ ತೆರಳಿ ಪ್ರಜ್ವಲ್ ರೇವಣ್ಣ ಪೂಜೆ ಸಲ್ಲಿಸಿದ್ದಾರೆ.
ಓದಿ :ಜೆಡಿಎಸ್ ಜನತಾ ಜಲಧಾರೆ ಆರಂಭ.. ಮೇ 8ರವರೆಗೂ ಒಟ್ಟು 94 ಕಡೆ ಜಲ ಸಂಗ್ರಹ..