ಕರ್ನಾಟಕ

karnataka

ETV Bharat / city

ಸಿಎಂ ದೆಹಲಿ ಪ್ರವಾಸ ಬೆನ್ನೆಲ್ಲೇ ಬೆಳಗಾವಿಯಲ್ಲಿ ಶೆಟ್ಟರ್-ರಮೇಶ್ ಜಾರಕಿಹೊಳಿ‌ ಗೌಪ್ಯ ಭೇಟಿ

ಪೂರ್ವನಿಯೋಜಿತ ಕಾರ್ಯಕ್ರಮ ರದ್ದುಗೊಳಿಸಿ ಸಚಿವ ರಮೇಶ್ ಜಾರಕಿಹೊಳಿ, ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದರು. ಶಾಸಕ ಅನಿಲ್ ಬೆನಕೆ, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಇತರ ಬಿಜೆಪಿ ‌ನಾಯಕರನ್ನು ಹೊರಗೆ ಕಳುಹಿಸಿ ಉಭಯ ‌ನಾಯಕರು ಮಾತುಕತೆ ನಡೆಸಿದರು ಎನ್ನಲಾಗಿದೆ.

jagadish-shetter-ramesh-jarakiiholi-confidential-meeting
ಜಗದೀಶ್ ಶೆಟ್ಟರ್ ರಮೇಶ್ ಜಾರಕಿಹೊಳಿ

By

Published : Jan 10, 2021, 8:50 PM IST

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವರಿಷ್ಠರನ್ನು ಭೇಟಿಯಾದ ಬೆನ್ನಲ್ಲೇ ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ರಮೇಶ್ ಜಾರಕಿಹೊಳಿ‌ ದಿಢೀರ್ ಭೇಟಿ ಅಚ್ಚರಿಗೆ ಕಾರಣವಾಗಿದೆ.

ನಗರದ ಸಾಂಬ್ರಾ ವಿಮಾನ ‌ನಿಲ್ದಾಣದ ವಿಐಪಿ ಲಾಂಜ್​ನಲ್ಲಿ ಉಭಯ ನಾಯಕರು ಭೇಟಿಯಾಗಿ ಕೆಲ ಹೊತ್ತು ಗೌಪ್ಯವಾಗಿ ಮಾತುಕತೆ ‌ನಡೆಸಿದರು. ಬೆಳಗಾವಿಯ ಪೂರ್ವನಿಯೋಜಿತ ಕಾರ್ಯಕ್ರಮ ರದ್ದುಗೊಳಿಸಿ ಸಚಿವ ರಮೇಶ್ ಜಾರಕಿಹೊಳಿ, ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದರು. ಶಾಸಕ ಅನಿಲ್ ಬೆನಕೆ, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಇತರ ಬಿಜೆಪಿ ‌ನಾಯಕರನ್ನು ಹೊರಗೆ ಕಳುಹಿಸಿ ಉಭಯ ‌ನಾಯಕರು ಮಾತುಕತೆ ನಡೆಸಿದರು.

ಓದಿ-ಸಂಪುಟ ವಿಸ್ತರಣೆ ಕುರಿತಂತೆ ಹೈಕಮಾಂಡ್​​​ ನಿರ್ಧಾರಕ್ಕೆ ನಾನು ಬದ್ಧ: ಶಶಿಕಲಾ ಜೊಲ್ಲೆ

ಅಮಿತ್ ಶಾ ಬೆಳಗಾವಿ ಆಗಮನದ ಬಗ್ಗೆ ಮಾತುಕತೆ ‌ನಡೆಸಿ ಬಳಿಕ ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆ ಕುರಿತು ಚರ್ಚಿಸಿದರು. ಸಂಪುಟ ವಿಸ್ತರಣೆ, ಸಿಎಂ ದೆಹಲಿ ಭೇಟಿ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದರು. ಬೆಳಗಾವಿಯಲ್ಲಿ ಅಮಿತ್ ಶಾ ಅವರ ಕಾರ್ಯಕ್ರಮದ ಸ್ಥಳ ಪರಿಶೀಲನೆ ಅರ್ಧಕ್ಕೆ ಬಿಟ್ಟು ಸಚಿವ ‌ಜಾರಕಿಹೊಳಿ ತರಾತುರಿಯಲ್ಲಿ ಏರ್​ಪೋರ್ಟ್​ಗೆ ತೆರಳಿದರು.

ಮಾತುಕತೆ ಬಳಿಕ ಸಚಿವ ‌ಜಗದೀಶ್​ ಶೆಟ್ಟರ್ ಬೆಳಗಾವಿಯಿಂದ ಹೈದರಾಬಾದ್ ಕಡೆ ತೆರಳಿದರು. ಇತ್ತ ಸಚಿವ ರಮೇಶ್​ ಜಾರಕಿಹೊಳಿ‌ ಗೋಕಾಕಿಗೆ ತೆರಳಿದರು.

ABOUT THE AUTHOR

...view details