ಬೆಳಗಾವಿ: ಜಿಲ್ಲೆಯ ಬೈಲಹೊಂಗಲದ ಕಂದಾಯ ಇಲಾಖೆ ನಿರೀಕ್ಷಕರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕಂದಾಯ ನಿರೀಕ್ಷಕ ಸೇರಿ ಮೂವರನ್ನು ಬಂಧಿಸಲಾಗಿದೆ.
ಬೈಲಹೊಂಗಲ ಕಂದಾಯ ಇಲಾಖೆ ಕಚೇರಿ ಮೇಲೆ ಎಸಿಬಿ ದಾಳಿ: ಮೂವರ ಬಂಧನ - undefined
ಬೈಲಹೊಂಗಲದ ಕಂದಾಯ ಇಲಾಖೆ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕಂದಾಯ ನಿರೀಕ್ಷಕ ಸೇರಿ ಮೂವರನ್ನು ಬಂಧಿಸಲಾಗಿದೆ ಹಾಗೂ ಬಂಧಿತರಿಂದ 1.86 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಬೈಲಹೊಂಗಲ ಕಂದಾಯ ಇಲಾಖೆ ಕಚೇರಿ
ಕಂದಾಯ ನಿರೀಕ್ಷಕ ಇಬ್ರಾಹಿಂ ಕೊಂಡುನಾಯ್ಕ್ ಹಾಗೂ ಏಜೆಂಟರ್ಗಳಾದ ದಿಲಾವರ ನದಾಫ್ ಮತ್ತು ದಾದಾಫಿರ್ ತಹಸಿಲ್ದಾರ್ ಬಂಧಿತರು. ಅಲ್ಲದೆ ಬಂಧಿತರಿಂದ 1.86 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದರು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.