ಅಥಣಿ: ಶಾಸಕ ಮಹೇಶ್ ಕುಮಟಳ್ಳಿ ಬಿಜೆಪಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆಯೇ ಎಂಬ ಅನುಮಾನವನ್ನು ಅವರ ಫೇಸ್ಬುಕ್ ಪೋಸ್ಟ್ ಮೂಡಿಸಿದೆ.
ನಮ್ಮ ಜೀವನವೆಂಬ ನೌಕೆಗೆ ನಾವೇ ನಾವಿಕರಾಗಬೇಕು: ಎಫ್ಬಿಯಲ್ಲಿ ಕುಮಟಳ್ಳಿ ಪೋಸ್ಟ್ - Athani Mahesh Kumatalli news
ಶಾಸಕ ಮಹೇಶ್ ಕುಮಟಳ್ಳಿ ಬಿಜೆಪಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆಯೇ ಎಂಬ ಅನುಮಾನವನ್ನು ಅವರ ಫೇಸ್ಬುಕ್ ಪೋಸ್ಟ್ ಮೂಡಿಸಿದೆ.
![ನಮ್ಮ ಜೀವನವೆಂಬ ನೌಕೆಗೆ ನಾವೇ ನಾವಿಕರಾಗಬೇಕು: ಎಫ್ಬಿಯಲ್ಲಿ ಕುಮಟಳ್ಳಿ ಪೋಸ್ಟ್ Is Mahesh Kumatalli dissatisfied with BJP](https://etvbharatimages.akamaized.net/etvbharat/prod-images/768-512-6273383-thumbnail-3x2-lek.jpg)
ಶಾಸಕ ಮಹೇಶ್ ಕುಮಟಳ್ಳಿ ಫೇಸ್ಬುಕ್ ಪೋಸ್ಟ್
ಮಹೇಶ್ ಕುಮಟಳ್ಳಿ ಅವರು ಫೇಸ್ಬುಕ್ ಪೇಜ್ನಲ್ಲಿ "ಜೀವನವೆಂಬ ಸಾಗರದಲ್ಲಿ ಕಷ್ಟಕಾರ್ಪಣ್ಯಗಳೆಂಬ ಬಿರುಗಾಳಿ, ಅಬ್ಬರದ ಅಲೆಗಳು, ಜೀವನವೆಂಬ ನೌಕೆಯನ್ನು ದಿಕ್ಕು ಕೆಡಿಸುತ್ತವೆ. ಆದರೆ "ಧೈರ್ಯ ಹಾಗೂ ಆತ್ಮವಿಶ್ವಾಸ" ಎಂಬ ಪ್ರಬಲ ಅಸ್ತ್ರದಿಂದ ನಾವಿಕನಂತೆ ದಾರಿ ಕಂಡುಕೊಳ್ಳುತ್ತಾ, ಜೀವನವೆಂಬ ಸಾಗರದಲ್ಲಿ ನಿರ್ದಿಷ್ಟ ಗುರಿ ತಲುಪಬೇಕು ಎಂದು ಪೋಸ್ಟ್ ಮಾಡಿದ್ದಾರೆ.
ಪ್ರಮುಖವಾಗಿ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಅವರ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಶಾಸಕರ ಎಫ್ಬಿ ಪೋಸ್ಟ್ ಮತ್ತಷ್ಟು ಕುತೂಹಲ ಮೂಡಿಸಿದೆ.