ಬೆಳಗಾವಿ :ಹೋಮ್ ಮಿನಿಸ್ಟರ್, ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸಿಡಿಯಲ್ಲಿದ್ದ ಯುವತಿ ಸಿಗುತ್ತಿಲ್ಲವೆಂದು ನಮ್ಮನ್ನು ಹಿಡಿಯಲು ಗಡಿ ಭಾಗಕ್ಕೆ ಬರ್ತಾರೆ ಎಂದು ಪೊಲೀಸರ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹರಿಹಾಯ್ದರು.
ಪೊಲೀಸ್ ಇಲಾಖೆ ವಿರುದ್ಧ ವಾಟಾಳ್ ನಾಗರಾಜ್ ಗುಡುಗು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದನದಲ್ಲಿ 'ಸಿಡಿ ಚರ್ಚೆ ವಿಚಾರಕ್ಕೆ ಗರಂ ಆದ ವಾಟಾಳ್ ನಾಗರಾಜ್, 25 ದಿನ ಬಳಿಕ ಈಗೇಕೆ ಈ ಪ್ರಕರಣವನ್ನು ಚರ್ಚೆಗೆ ತೆಗೆದುಗೊಂಡಿದ್ದಾರೆ. ಸಿಡಿ ವಿಚಾರವಾಗಿ ವಿಧಾನಸಭೆ ಕಲಾಪದಲ್ಲಿ ಪ್ರಾಮಾಣಿಕ ಚರ್ಚೆ ನಡಿಯುತ್ತಿಲ್ಲ, ಅದು ವಿಧಾನ ಹದಗೆಟ್ಟು ಹೋಗಿದೆ.
ಸಿಡಿಯಲ್ಲಿದ್ದ ಯುವತಿ ಸಿಗುತ್ತಿಲ್ಲವೆಂದು ನಮ್ಮನ್ನ ಹಿಡಿಯಲು ಗಡಿಭಾಗಕ್ಕೆ ಬರ್ತಾರೆ. ಆ ಹೆಣ್ಣು ಮಗಳನ್ನು ಹಿಡಿಯಲು ಆಗದಿದ್ದರೆ ಪೊಲೀಸರೇನು ಮಾಡ್ತಿದ್ದಾರೆ?. ಸಿಐಡಿ, ಪೊಲೀಸ್ ಎಲ್ಲಾ ಸಿಡಿ ಜೊತೆ ಇದ್ದಾರೆ ಎಂದರು.
ಪೊಲೀಸರು ಎಂಇಎಸ್, ಶಿವಸೇನೆಗೆ ಹೆದರ್ತಾರೆ :ಬಸವರಾಜ ಬೊಮ್ಮಾಯಿ ಕೆಳಮಟ್ಟದ ಗೃಹಮಂತ್ರಿ, ಅವನಿಗ್ಯಾಕೆ ಗೃಹಮಂತ್ರಿ ಸ್ಥಾನ ಕೊಟ್ಟರೋ? ಗೊತ್ತಿಲ್ಲ. ರಾಜ್ಯದಲ್ಲಿ ನಿಜಲಿಂಗಪ್ಪ ಸರ್ಕಾರದಲ್ಲಿ ಎಂ ವಿ ರಾಮರಾವ್‌ರಂತ ಗೃಹಮಂತ್ರಿ ಇದ್ದರು.
ಅವರು ಸದನದಲ್ಲಿಯೇ ಎಂ ವಿ ರಾಮರಾವ್ ರಾಜೀನಾಮೆ ಕೊಟ್ಟಿದ್ರು. ಹೋಮ್ ಮಿನಿಸ್ಟರ್, ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಬೆಳಗಾವಿ ಪೊಲೀಸರು ಎಂಇಎಸ್ ಶಿವಸೇನೆಗೆ ಹೆದರ್ತಾರೆ. ನಾವು ಇದರ ವಿರುದ್ಧ ಹೋರಾಟ ಮಾಡ್ತೇವೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.