ಕರ್ನಾಟಕ

karnataka

ETV Bharat / city

ತಹಶೀಲ್ದಾರ್​​ ಮೇಲೆಯೇ ಟ್ರ್ಯಾಕ್ಟರ್​ ಹತ್ತಿಸಲು ಯತ್ನ, ಚಾಲಕ ಗಂಭೀರ - ಚಾಲಕನಿಗೆ ಗಂಭೀರ

ಅಥಣಿ ತಾಲೂಕಿನಲ್ಲಿ ಅಕ್ರಮ ಮರುಳು ಸಾಗಾಟ ಕುರಿತು ಮಾಹಿತಿ ತಿಳಿದರೂ ಭೂ ಮತ್ತು ಗಣಿಗಾರಿಕೆ ಇಲಾಖೆ ಜಾಣ ಮೌನವಹಿಸಿದೆ. ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

illegal-sand-shipping-in-athani
ಗಾಯಗೊಂಡ ತಹಶೀಲ್ದಾರ್​ ಚಾಲಕ

By

Published : Apr 29, 2020, 4:54 PM IST

ಅಥಣಿ:ಲಾಕ್​​​ಡೌನ್​​ ನಡುವೆಯೂ ಅಕ್ರಮ ಮರಳು ಸಾಗಾಟ ಮುಂದುವರೆದಿದ್ದು, ಅಕ್ರಮ ತಡೆಯಲು ಹೋದ ಅಥಣಿ ತಹಶೀಲ್ದಾರ್​​ ದುಂಡಪ್ಪ ಕೋಮಾರ ಅವರ ಮೇಲೆಯೇ ವಾಹನ ಹರಿಸಿ ಕೊಲೆ ಪ್ರಯತ್ನ ನಡೆದಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.

ಬಾಳು ಹಜಾರೆ ಎಂಬಾತ ಟ್ರ್ಯಾಕ್ಟರ್ ಹತ್ತಿಸಿ ಹಲ್ಲೆಗೆ ಯತ್ನಿಸಿದ. ತಾಲೂಕಿನ ಖಿಳೆಗಾಂವ-ಶಿರೂರ ನಡುವಿನ ಹಳ್ಳದಲ್ಲಿ ಮರಳು ಸಾಗಿಸುತ್ತಿದ್ದರ ಕುರಿತು ಮಾಹಿತಿ ಪಡೆದು ತಹಶೀಲ್ದಾರ್​ ಮತ್ತು ಸಿಬ್ಬಂದಿ ದಾಳಿ ನಡೆಸಿದಾಗ ಈ ಘಟನೆ ಸಂಭವಿಸಿದೆ. ಆ ಸಂದರ್ಭದಲ್ಲಿ ತಹಶೀಲ್ದಾರ್​​ ವಾಹನ ಚಾಲಕ ಅನಿಲ್​​​ ಗಸ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ.

ಗಾಯಗೊಂಡ ತಹಶೀಲ್ದಾರ್​ ಚಾಲಕ

ಕೊರೊನಾ ವೈರಸ್​ ನಿಯಂತ್ರಿಸುವ ಸಲುವಾಗಿ ಪೊಲೀಸರು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಸುತ್ತಿದ್ದಾರೆ. ಅಕ್ರಮವನ್ನು ಹೋದ ತಹಶೀಲ್ದಾರ್​​​ ಮೇಲಿನ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಹೀಗಾಗಿ ಕಂದಾಯ ಇಲಾಖೆಯ ಉಳಿದ ಸಿಬ್ಬಂದಿ ಕೂಡ ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸಲು ಭಯದ ವಾತಾವರಣ ನಿರ್ಮಾಣವಾಗಿದೆ.

ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟ ತಡೆಯುವ ಹಂತದಲ್ಲಿ ಲೋಕೋಪಯೋಗಿ, ಜುವಾಲಜಿ ಇಲಾಖೆ, ತಹಶೀಲ್ದಾರ್​ ಹಾಗೂ ಪೊಲೀಸರ ನಡುವಿನ ಸಮನ್ವಯ ಕೊರತೆಯೂ ಅಕ್ರಮ ದಂಧೆಕೋರರಿಗೆ ಲಾಭದಾಯಕವಾಗಿ ಪರಿಣಮಿಸಿದೆ ಎನ್ನಲಾಗಿದೆ.

ABOUT THE AUTHOR

...view details