ಬೆಳಗಾವಿ: ಹೊಲದಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ವಿವಾಹಿತೆ ಹಾಗೂ ಆಕೆಯ ಪ್ರಿಯಕರನಿಗೆ ವಿಚಿತ್ರ ಶಿಕ್ಷೆ ನೀಡಿದ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಮುರಕಟನಾಳ ಗ್ರಾಮದಲ್ಲಿ ನಡೆದಿದೆ.
ಪ್ರಿಯಕರನ ಜತೆಗೆ ವಿವಾಹಿತೆಯ ಸಲ್ಲಾಪ... ಕುಟುಂಬಸ್ಥರ ಕಣ್ಣಿಗೆ ಬಿದ್ದಾಗ ಆಗಿದ್ದೇನು..! - ಬೆಳಗಾವಿ ಅನೈತಿಕ ಸಂಬಂಧ ಪ್ರಕರಣ
ಪತಿ ಕಣ್ತಪ್ಪಿಸಿ ಮನೆಯಿಂದ ಹೊರಬಂದ ವಿವಾಹಿತೆ ನೇರವಾಗಿ ಗ್ರಾಮದ ಹೊರವಲಯದ ಹೊಲದಲ್ಲಿ ಪ್ರಿಯಕರನ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದಳು. ಇಬ್ಬರನ್ನು ಕುಟುಂಬಸ್ಥರು ಸುಮಾರು ನಾಲ್ಕು ಗಂಟೆಗಳ ಕಾಲ ಸಾರ್ವಜನಿಕವಾಗಿ ಟ್ರ್ಯಾಕ್ಟರ್ಗೆ ಕಟ್ಟಿ ಶಿಕ್ಷೆ ನೀಡಿದ್ದಾರೆ.
ಸರಸ ಸಲ್ಲಾಪದಲ್ಲಿ ತೊಡಗಿದ್ದ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ಯುವಕ ಹಾಗೂ ಮುರಕಟನಾಳ ಗ್ರಾಮದ ವಿವಾಹಿತ ಮಹಿಳೆಯನ್ನು ಕುಟುಂಬಸ್ಥರು ಸುಮಾರು ನಾಲ್ಕು ಗಂಟೆಗಳ ಕಾಲ ಸಾರ್ವಜನಿಕವಾಗಿ ಟ್ರ್ಯಾಕ್ಟರ್ಗೆ ಕಟ್ಟಿ ಶಿಕ್ಷೆ ನೀಡಿದ್ದಾರೆ. ಪತಿ ಕಣ್ತಪ್ಪಿಸಿ ಮನೆಯಿಂದ ಹೊರಬಂದ ವಿವಾಹಿತೆ ನೇರವಾಗಿ ಗ್ರಾಮದ ಹೊರವಲಯದ ಹೊಲದಲ್ಲಿ ಪ್ರಿಯಕರನ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದಳು.
ಇಬ್ಬರನ್ನು ಕುಟುಂಬಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ನಂತರ ಇಬ್ಬರನ್ನು ಟ್ರ್ಯಾಕ್ಟರ್ಗೆ ಕಟ್ಟಿ ಮುಂದೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಘಟನೆಯ ಫೋಟೋ ವೈರಲ್ ಆಗಿದ್ದು, ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.