ಬೆಳಗಾವಿ:ಜಾರಕಿಹೊಳಿ ಸಹೋದರರ ಸ್ಪರ್ಧೆಯಿಂದ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿರುವ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ದಿನಗಣನೆ ಆರಂಭವಾಗ್ತಿದ್ದಂತೆ ಕಾಂಚಾಣ ಸದ್ದು ಮಾಡುತ್ತಿದೆ.
ಚುನಾವಣೆ ಅಧಿಕಾರಿಗಳ ಕಾರ್ಯಾಚರಣೆ: ದಾಖಲೆಯಿಲ್ಲದ 18.5 ಲಕ್ಷ ರೂ ಜಪ್ತಿ - ಬೆಳಗಾವಿಯ ಗೋಕಾಕ್ನಲ್ಲಿ ಅಕ್ರಮ ಹಣ ಜಪ್ತಿ
ಮರಡಿಮಠ ಗ್ರಾಮದ ಬಳಿ ಚುನಾವಣೆ ಅಧಿಕಾರಿಗಳು ಬೈಕ್ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ₹ 18.5 ಲಕ್ಷ ಜಪ್ತಿ ಮಾಡಿದ್ದಾರೆ.

ದಾಖಲೆಯಿಲ್ಲದೆ ಹಣ ಸಾಗಾಟ
ತಾಲೂಕಿನ ಮರಡಿಮಠ ಗ್ರಾಮದ ಬಳಿ ಚುನಾವಣೆ ಅಧಿಕಾರಿಗಳು ಬೈಕ್ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ₹ 18.5 ಲಕ್ಷ ಜಪ್ತಿ ಮಾಡಿದ್ದಾರೆ. ಪ್ಲೈಯಿಂಗ್ ಸ್ಕ್ವಾಡ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿದರು.
ಕೊಣ್ಣೂರ ಗ್ರಾಮದ ರಾಜು ಬೆಲಮರಡಿ, ವಿಶಾಲ್ ಹಂಚಿನಮನಿ ಹಣ ಸಾಗಿಸುತ್ತಿದ್ದವರು. ಪ್ರವೀಣ್ ಗುಡ್ಡಕಾಯಿ ಎಂಬಾತನಿಂದ ಹಣ ಪಡೆದು ಪಡೆದು ರಮೇಶ್ ಮರಡಿಮಠ ಎಂಬುವರಿಗೆ ತಲುಪಿಸಲು ತೆಗೆದುಕೊಂಡು ಹೋಗುವಾಗ ದಾಳಿ ನಡೆಸಿ ಹಣ ಜಪ್ತಿ ಮಾಡಲಾಗಿದೆ. ಗೋಕಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.