ಕರ್ನಾಟಕ

karnataka

ETV Bharat / city

ಬೇರೆಯವರ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ 6 ಮಂದಿ ಪೊಲೀಸರ ವಶಕ್ಕೆ - ಎಸ್​ಎಸ್​ಎಲ್​ಸಿ ಪರೀಕ್ಷೆ ಅಕ್ರಮ ನಡೆಸಿದ ಆರು ಮಂದಿ ವಶಕ್ಕೆ

ಬೇರೆಯವರ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ ಆರು ಮಂದಿಯನ್ನು ಬೆಳಗಾವಿಯ ಚಿಕ್ಕೋಡಿ ಪಟ್ಟಣ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Illegal activities in sslc examination:  6 detained in belagavi
ಬೇರೆಯವರ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ 6 ಮಂದಿ ಪೊಲೀಸರ ವಶಕ್ಕೆ

By

Published : Mar 28, 2022, 12:27 PM IST

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ ಐವರು ವಿದ್ಯಾರ್ಥಿಗಳು ಹಾಗೂ ಓರ್ವ ವಿದ್ಯಾರ್ಥಿನಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಗೋಕಾಕ್​ ತಾಲೂಕಿನ ಗೋಡಗೇರಿ ಗ್ರಾಮದ ರಾಹುಲ್ ಕಿಳ್ಳಿಕೇತರ, ಕೊಂಕಣಿ ಗ್ರಾಮದ ಭೀಮಶಿ ಹುಲಿಕುಂದ, ಬಾಗಲಕೋಟೆ ಜಿಲ್ಲೆಯ ಬಿಳಗಿ ಗ್ರಾಮದ ಕಾರ್ತಿಕ್ ಜಿಕುಂಬಾರ್, ಬಾಗಲಕೋಟೆ ಜಿಲ್ಲೆಯ ಚಿಕ್ಕಾಲಕೊಪ್ಪ ಗ್ರಾಮದ ಸಿದ್ದು ಮಾದೇವ್ ಜೋಗಿ ಹಾಗೂ ಗಿರಿಸಾಗರ ಗ್ರಾಮದ ಮಾಂತೇಶ್ ಸಂಗಪ್ಪ ಡೊಳ್ಳಿನವರ ಮತ್ತು ಬಾಗಲಕೋಟೆ ಜಿಲ್ಲೆಯ ಚಿಮ್ಮಡ ಗ್ರಾಮದ ಸವೀತಾ ಮಾದೇವ ಹೊಸೂರು ಸೇರಿ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಆರು ಜನ ವಿದ್ಯಾರ್ಥಿಗಳು ಬೇರೆಯವರ ಬದಲಾಗಿ ಪರೀಕ್ಷೆ ಬರೆಯಲು ಬಂದಿದ್ದರು. ಹಾಲ್ ಟಿಕೆಟ್ ಪರಿಶೀಲನೆ ನಡೆಸುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ, ವಿದ್ಯಾರ್ಥಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಎಸ್ಎಸ್ಎಲ್​ಸಿ ಪರೀಕ್ಷೆ ಆರಂಭ; ನಮಗೆ ಮಕ್ಕಳ ಭವಿಷ್ಯವೇ ಮುಖ್ಯ ಎಂದ ತಾಯಿ!

ABOUT THE AUTHOR

...view details