ಕರ್ನಾಟಕ

karnataka

ETV Bharat / city

ಸತೀಶ್​ ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇನೆ, ಪ್ರಚಾರ ಕೂಡ ಮಾಡುತ್ತೇನೆ: ಭೀಮಶಿ ಜಾರಕಿಹೊಳಿ‌ - belagavi news

ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇನೆ. ಯಮಕನಮರಡಿ ಕ್ಷೇತ್ರದಲ್ಲಿ ಅವರು ಬಿಜೆಪಿ ಅಭ್ಯರ್ಥಿ ಆದರೆ, ಸತೀಶ್​ ಪರ ನಾನು‌ ಪ್ರಚಾರ ಮಾಡಲು ಸಿದ್ದನಿದ್ದೇನೆ. ಎಂದು ಕಾರ್ಮಿಕ ‌ಮುಖಂಡ ಭೀಮಶಿ ಜಾರಕಿಹೊಳಿ‌ ‌ಹೇಳಿದ್ದಾರೆ.

ಕಾರ್ಮಿಕ ‌ಮುಖಂಡ ಭೀಮಶಿ ಜಾರಕಿಹೊಳಿ‌ ‌

By

Published : Nov 22, 2019, 4:14 PM IST

ಬೆಳಗಾವಿ: ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇನೆ. ಯಮಕನಮರಡಿ ಕ್ಷೇತ್ರದಲ್ಲಿ ಅವರು ಬಿಜೆಪಿ ಅಭ್ಯರ್ಥಿ ಆದರೆ, ಸತೀಶ್​ ಪರ ನಾನು‌ ಪ್ರಚಾರ ಮಾಡಲು ಸಿದ್ದನಿದ್ದೇನೆ ಎಂದು ಕಾರ್ಮಿಕ ‌ಮುಖಂಡ ಭೀಮಶಿ ಜಾರಕಿಹೊಳಿ‌ ‌ಹೇಳಿದ್ದಾರೆ.

ಸತೀಶ್​ ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇನೆ: ಭೀಮಶಿ ಜಾರಕಿಹೊಳಿ‌

ಜಾರಕಿಹೊಳಿ‌ ಸಹೋದರರಿಗೆ ಸಿಎಂ ಆಗುವ ಅರ್ಹತೆಯಿದೆ ಎಂಬ ವಾಲ್ಮೀಕಿ ಗುರುಪೀಠದ ಸ್ವಾಮೀಜಿ‌ ಹೇಳಿಕೆಗೆ ಗೋಕಾಕ್​​ ನಲ್ಲಿ ‌ಪ್ರತಿಕ್ರಿಯೆ ನೀಡಿದ ಅವರು, ಸತೀಶ್​ ಜಾರಕಿಹೊಳಿ, ರಮೇಶ್​ ಜಾರಕಿಹೊಳಿ‌, ಬಾಲಚಂದ್ರ ಜಾರಕಿಹೊಳಿ‌ ಈ ಮೂವರಿಗೂ ಸಿಎಂ ಆಗುವ ಅರ್ಹತೆಯಿದೆ. ಮುಂದಿನಗಳಲ್ಲಿ ಆದರೂ ಆಗಬಹುದು. 2008ರಲ್ಲಿ ಗೋಕಾಕ್ ಕ್ಷೇತ್ರದಲ್ಲಿ ನಾನು ಬಿಜೆಪಿ ಅಭ್ಯರ್ಥಿಯಾಗಿದ್ದೆ. ಆಗ ಕಾಂಗ್ರೆಸ್ ಪಕ್ಷದಿಂದ ರಮೇಶ್​ ಜಾರಕಿಹೊಳಿ‌ ಸ್ಪರ್ಧೆ ಮಾಡಿದ್ರು. ಈಗ ಗೋಕಾಕ್ ಕ್ಷೇತ್ರದ ಚಿತ್ರಣ ಬದಲಾವಣೆ ಆಗಿದೆ.
ಗೋಕಾಕಿನ‌ ಕಾಂಗ್ರೆಸ್ ‌ಅಭ್ಯರ್ಥಿ ಲಖನ್ ಕೂಡ ಬಿಜೆಪಿ ‌ಸೇರಲಿ. ಜಿಲ್ಲೆಯಲ್ಲಿ ಯಾವುದಾದರೂ ಒಂದು‌ ಕ್ಷೇತ್ರದ ಟಿಕೆಟ್ ಕೊಡಿಸಲು ನಾಯಕರ ಮನವೊಲಿಸುತ್ತೇನೆ. ದೇಶದಲ್ಲಿ ಮೋದಿ,ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರದಿಂದ ಅಭಿವೃದ್ಧಿಯಾಗುತ್ತಿದೆ ಎಂದರು.

ABOUT THE AUTHOR

...view details