ಕರ್ನಾಟಕ

karnataka

ETV Bharat / city

ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ : ಶಾಸಕ ಮಹೇಶ್ ಕುಮಠಳ್ಳಿ ಸ್ಪಷ್ಟನೆ - undefined

ಕಳೆದ 25 ವರ್ಷದಿಂದ ಶಾಸಕ ರಮೇಶ್​ ಜಾರಕಿಹೊಳಿ ಮತ್ತು ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇವೆ. ಕಳೆದ ಒಂದು ತಿಂಗಳಿನಿಂದ ಯಾವೆಲ್ಲ ಬೆಳವಣಿಗೆ ಆಗಿದೆ ಎಂದು ನನಗೆ ತಿಳಿದಿಲ್ಲ ಎಂದು ರಾಜೀನಾಮೆ ಪ್ರಸ್ತಾಪವನ್ನು ಶಾಸಕ ಮಹೇಶ್ ಕುಮಠಳ್ಳಿ ತಳ್ಳಿಹಾಕಿದ್ದಾರೆ.

ಮಹೇಶ್ ಕುಮಠಳ್ಳಿ

By

Published : Apr 26, 2019, 2:09 PM IST

ಬೆಳಗಾವಿ : ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅವರ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದೆ. ರಮೇಶ್ ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ ಎಂದು ಅಥಣಿ ಶಾಸಕ ರಾಜೀನಾಮೆ ಪ್ರಸ್ತಾಪ ತಳ್ಳಿಹಾಕಿದ್ದಾರೆ.

ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರ ಕುರಿತು ಮಹೇಶ್ ಕುಮಠಳ್ಳಿ ಪ್ರತಿಕ್ರಿಯೆ

ನಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಹೇಶ್ ಕುಮಠಳ್ಳಿ, ಕಳೆದ 25 ವರ್ಷದಿಂದ ಶಾಸಕ ರಮೇಶ್​ ಜಾರಕಿಹೊಳಿ ಮತ್ತು ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇವೆ. ಕಳೆದ ಒಂದು ತಿಂಗಳಿನಿಂದ ಯಾವೆಲ್ಲ ಬೆಳವಣಿಗೆ ಆಗಿದೆ ಎಂದು ನನಗೆ ತಿಳಿದಿಲ್ಲ ಎಂದರು.

ರಮೇಶ್ ಜಾರಕಿಹೊಳಿ ರಾಜೀನಾಮೆ ಪ್ರಸ್ತಾಪವಾದಾಗ ಅಥಣಿ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹ ಬರುತ್ತಿದೆ. ಆದರೆ ನಾನು ನನ್ನ ಕ್ಷೇತ್ರದಲ್ಲಿನ ಹಲವಾರು ಸಮಸ್ಯೆಳು ಹಾಗೂ ಅದರ ಪರಿಹಾರದ ಕಡೆ ಗಮನ ಹರಿಸಿದ್ದೇನೆ. ಹಾಗಾಗಿ ರಾಜೀನಾಮೆ ಗೀಜಿನಾಮೆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಆ ಬಗ್ಗೆ ಯೋಚನೆಯನ್ನೂ ಮಾಡಿಲ್ಲ ಎಂದು ಕಮಠಳ್ಳಿ ಸ್ಪಷ್ಟಪಡಿಸಿದರು.

For All Latest Updates

TAGGED:

ABOUT THE AUTHOR

...view details