ಕರ್ನಾಟಕ

karnataka

ETV Bharat / city

ಬೆಳಗಾವಿಯಲ್ಲಿ ಮತ್ತೊಂದು‌ ಮನೆ ಗೋಡೆ ಕುಸಿತ: 2 ತಿಂಗಳ ಹಸುಗೂಸು, ತಾಯಿ ಪಾರು - ಗೋಡೆ ಕುಸಿತ

ಬೆಳಗಾವಿಯಲ್ಲಿ ಮತ್ತೊಂದು‌ ಮನೆ ಗೋಡೆ ಕುಸಿತವಾಗಿದೆ. ಅದೃಷ್ಟವಶಾತ್ ಗೋಡೆಯ ಪಕ್ಕದಲ್ಲೇ ಮಲಗಿದ್ದ ಎರಡು ತಿಂಗಳ ಮಗು ಮತ್ತು ತಾಯಿ ಬದುಕುಳಿದಿದ್ದಾರೆ.

House wall collapse
ಬೆಳಗಾವಿಯಲ್ಲಿ ಮನೆ ಗೋಡೆ ಕುಸಿತ

By

Published : Aug 10, 2022, 10:46 AM IST

ಬೆಳಗಾವಿ: ಪಶ್ಚಿಮಘಟ್ಟ ಮತ್ತು ಬೆಳಗಾವಿ ಜಿಲ್ಲಾದ್ಯಂತ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಭೂತರಾಮನಹಟ್ಟಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ 2 ತಿಂಗಳ ಹಸುಗೂಸು ಮತ್ತು ತಾಯಿ ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ.

ಬೆಳಗಾವಿಯಲ್ಲಿ ಮನೆ ಗೋಡೆ ಕುಸಿತ

ಭೀಮರಾಯ ಪಾಟೀಲ್ (44) ಎಂಬವರಿಗೆ ಸೇರಿದ ಮನೆಯ ಗೋಡೆ ಇಂದು ಬೆಳಗಿನ ಜಾವ ನೆಲಸಮವಾಗಿದೆ. ಮನೆಯ ಹೊರ ಭಾಗದ ಗೋಡೆ ಕುಸಿತವಾಗುವುದನ್ನ ಗಮನಿಸಿದ ಭೀಮರಾವ್, ಕೂಡಲೇ ಮಗು ಮತ್ತು ತಾಯಿಯನ್ನ ಹೊರಗಡೆ ಕರೆದುಕೊಂಡು ಬಂದಿದ್ದಾರೆ. ಅವರು ಹೊರಬಂದ ಕೆಲವೇ ಹೊತ್ತಿನಲ್ಲಿ ಗೋಡೆ ಕುಸಿದಿದೆ.

ಈ ಕುರಿತು ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಶಿಥಿಲಾವ್ಯವಸ್ಥೆಯಲ್ಲಿರುವ ಮಣ್ಣಿನಿಂದ ನಿರ್ಮಿಸಿದ ಮನೆಗಳನ್ನ ಸರ್ವೇ ಮಾಡಬೇಕು. ಒಂದು ವೇಳೆ ಬೀಳುವ ಹಂತದಲ್ಲಿರುವ ಮನೆಗಳಲ್ಲಿನ ಕುಟುಂಬಸ್ಥರನ್ನು ಸ್ಥಳಾಂತರಿಸಲು ಅವರ ಮನವೊಲಿಸಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಬಾಗಲಕೋಟೆ: ಭಾರಿ ಮಳೆಗೆ 65ಕ್ಕೂ ಅಧಿಕ ಮನೆಗಳು ಕುಸಿತ

ABOUT THE AUTHOR

...view details