ಕರ್ನಾಟಕ

karnataka

ETV Bharat / city

ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀಗೆ ಕ್ಲೀನ್ ಚೀಟ್ ಆರೋಪ: ಗೃಹ ಸಚಿವರ ಮಹತ್ವದ ಹೇಳಿಕೆ - ನಿರೂಪಕಿ ಅನುಶ್ರೀಗೆ ಕ್ಲೀನ್ ಚೀಟ್ ಆರೋಪ

ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀಗೆ ಪರವಾಗಿ ಯಾವ ರಾಜಕೀಯ ನಾಯಕರೂ ನಮ್ಮ ಮೇಲೆ ಒತ್ತಡ ತರುತ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

home-minister-on-sandalwood-drug-case-and-anchor-anushri
ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀಗೆ ಕ್ಲೀನ್ ಚೀಟ್ ಆರೋಪ: ಗೃಹಸಚಿವರ ಮಹತ್ವದ ಹೇಳಿಕೆ

By

Published : Sep 8, 2021, 11:17 AM IST

Updated : Sep 8, 2021, 2:12 PM IST

ಬೆಳಗಾವಿ:ಸ್ಯಾಂಡಲ್​ವುಡ್​​ ಡ್ರಗ್ಸ್ ಸೇವನೆ ಪ್ರಕರಣದ ಚಾರ್ಜ್​​​​ಶೀಟ್​​ನಲ್ಲಿ ನಿರೂಪಕಿ ಅನುಶ್ರೀ ಹೆಸರು ಕೈಬಿಟ್ಟ ಉಹಾಪೋಹ ವಿಚಾರಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಬೆಳಗಾವಿಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ.

ನಿರೂಪಕಿ ಅನುಶ್ರೀ ಹೆಸರು ಕೈಬಿಟ್ಟಿರುವ ವಿಚಾರ ನಂಗೆ ಗೊತ್ತಿಲ್ಲ. ಕೇಳಿ ಹೇಳುತ್ತೇನೆ. ಡ್ರಗ್ಸ್ ಪ್ರಕರಣವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅನುಶ್ರೀಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಯಾವ ರಾಜಕೀಯ ನಾಯಕರೂ ನಮ್ಮ ಮೇಲೆ ಒತ್ತಡ ತರುತ್ತಿಲ್ಲ. ಡ್ರಗ್ಸ್ ಪ್ರಕರಣದಲ್ಲಿ ರಾಜಕೀಯ ನಾಯಕರು ಆರೋಪಿಗಳ ಬಚಾವ್ ಮಾಡಲು ಒತ್ತಡ ಹಾಕಲ್ಲ ಎಂದರು.

ಗೃಹಸಚಿವ ಆರಗ ಜ್ಞಾನೇಂದ್ರ

ಡ್ರಗ್ಸ್ ಸೇವನೆ, ಪೂರೈಕೆ ಪ್ರಕರಣ ಗಂಭೀರವಾದದ್ದು. ಎಂಥ ಪ್ರಭಾವಿಗಳಾಗಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಖಚಿತ. ನಿರೂಪಕಿ ಅನುಶ್ರೀ ಕೇಸ್​​ನಲ್ಲಿ ನಮಗೆ ರಾಜಕೀಯ ಒತ್ತಡಗಳಿಲ್ಲ. ನಮ್ಮ ಪೊಲೀಸರು ಇಂತಹ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಅನುಶ್ರೀ ಹೆಸರನ್ನು ಕೈಬಿಟ್ಟಿದ್ದರೆ, ಆ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದರು.

Last Updated : Sep 8, 2021, 2:12 PM IST

ABOUT THE AUTHOR

...view details