ಕರ್ನಾಟಕ

karnataka

ETV Bharat / city

ನಮ್ಮಲ್ಲಿ ಯಾವುದೇ ಹಿಡನ್ ಅಜೆಂಡಾ ಇಲ್ಲ, ನಮ್ಮದು ಓಪನ್ ಅಜೆಂಡಾ: ಗೃಹ ಸಚಿವ ಆರಗ ಜ್ಞಾನೇಂದ್ರ - Home Minister Araga Jnanendra On Anti Conversion Bill

ನಾವು ಮತಾಂತರ ನಿಷೇಧ ಕಾಯ್ದೆ ತರುತ್ತೇವೆ ಎಂದು ಮುಂಚೆನೇ ಹೇಳಿದ್ದೆವು. ಅದನ್ನು ಈಗ ತಂದಿದ್ದೇವೆ. ನಮ್ಮಲ್ಲಿ ಯಾವುದೇ ಹಿಡನ್ ಅಜೆಂಡಾ ಇಲ್ಲ.‌ ನಮ್ಮದು ಓಪನ್‌ ಅಜೆಂಡಾ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

Home Minister Araga Jnanendra On Anti Conversion Bill
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ

By

Published : Dec 23, 2021, 6:59 PM IST

ಬೆಳಗಾವಿ: ನಮ್ಮಲ್ಲಿ ಯಾವುದೇ ಹಿಡನ್ ಅಜೆಂಡಾ ಇಲ್ಲ.‌ ನಮ್ಮದು ಓಪನ್‌ ಅಜೆಂಡಾ ಎಂದು ಮತಾಂತರ ನಿಷೇಧ ವಿಧೇಯಕ ಅಂಗೀಕಾರ ಮಾಡಿರುವ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ವಿಧೇಯಕ ಕೆಳಮನೆಯಲ್ಲಿ ಪಾಸ್ ಆಗಿದೆ. ಅನೇಕ‌ರು ಮಸೂದೆ ಬಗ್ಗೆ ಟೀಕೆ ಟಿಪ್ಪಣಿ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅದು ಸಹಜ. ಕಾಯ್ದೆ ತರುತ್ತೇವೆ ಎಂದು ನಾವು ಈ ಮುಂಚೆನೇ ಹೇಳಿದ್ದೆವು. ಅದನ್ನು ಈಗ ತಂದಿದ್ದೇವೆ.

ಸಂವಿಧಾನದ ಚೌಕಟ್ಟಿನ‌ ಒಳಗೆ ವ್ಯಕ್ತಿಗೆ ಇನ್ನೊಂದು ಧರ್ಮ ಸ್ವೀಕಾರ ಮಾಡುವ ಹಕ್ಕಿದೆ. ಮತ ಪ್ರಚಾರ ಮಾಡಬಹುದು. ಆದರೆ, ಮತಾಂತರ ‌ಮಾಡುವ ಹಕ್ಕಿಲ್ಲ. ಇದರ ದುರುಪಯೋಗ ಆಗುತ್ತಿತ್ತು. ಅದನ್ನು ಸ್ಟ್ರೀಮ್ ಲೈನ್ ಮಾಡಿದ್ದೇವೆ. ಹೊಸ ಕಾನೂನಿನಡಿ ಎಸ್​ಸಿ- ಎಸ್​ಟಿಗೆ ಸೇರಿದವರು ಮತಾಂತರ ಆದರೆ ಅವರು ಮೂಲ ಮತ ಕಳೆದುಕೊಳ್ಳುತ್ತಾರೆ. ಅದರಂತೆ ಅವರು ಮೂಲ ಮತಕ್ಕೆ ಸಿಗುವ ಸರ್ಕಾರಿ ಸೌಲಭ್ಯ ಕಳೆದು ಕೊಳ್ಳುತ್ತಾರೆ ಎಂದರು.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ

ಮತಾಂತರ ದೊಡ್ಡ ಪಿಡುಗು ಆಗಿತ್ತು.‌ ಸಾವಿರಾರು ಜನ‌ ಮತಾಂತರ ಆಗಿದ್ದರು. ಇದು ಯಾವ ಧರ್ಮದ ವಿರುದ್ಧವೂ ಅಲ್ಲ. ಮತಾಂತರ ಪಾರದರ್ಶಕವಾಗಿರಬೇಕು. ದೇಶದಲ್ಲಿ ಈಗಾಗಲೇ ಎಂಟು ರಾಜ್ಯಗಳಲ್ಲಿ ಇದೆ. ನಮ್ಮದು 9ನೇ ರಾಜ್ಯ ಆಗಿದೆ. ಬೇರೆ ದೇಶಗಳಲ್ಲೂ ಈ ಕಾನೂನು ಇದೆ ಎಂದು ಗೃಹ ಸಚಿವರು ವಿವರಿಸಿದರು.

ಇದನ್ನೂ ಓದಿ: ವಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ

ಕಾಯ್ದೆ ಹೆಸರಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುವವರಿಗೆ ಎಚ್ಚರಿಕೆ ನೀಡುತ್ತೇನೆ. ಅವರು ಕಾನೂನು ಕೈಗೆ ತಗೊಳುವ ಹಾಗಿಲ್ಲ. ಹಿಂದೆ ಕಾನೂನು ಇಲ್ಲದ ಕಾರಣ ದೂರು ಕೊಟ್ಟರೂ ಕ್ರಮ ಆಗುತ್ತಿರಲಿಲ್ಲ. ಇದರಿಂದ ಜನರು ಆಕ್ರೋಶಕ್ಕೊಳಗಾಗುತ್ತಿದ್ದರು. ಈಗ ಕಾಯ್ದೆ ಬಂದಿರುವುದರಿಂದ ದೂರು ಕೊಟ್ಟರೆ ಸಾಕು, ಕ್ರಮ ಜರುಗಿಸಲಾಗುತ್ತದೆ. ಕಾನೂನು ಕೈಗೆತ್ತಿಕೊಳ್ಳುವ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡ ಸಂಘಟನೆಗಳು ಬಂದ್​​ಗೆ ಕರೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹಾಪುರುಷರ ಪ್ರತಿಮೆ, ಬಸವಣ್ಣನ ಭಾವಚಿತ್ರಕ್ಕೆ ಮಾಡಿದ ಅವಮಾನ ಸಂಬಂಧ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಅವರು ಮತ್ತೆ ಈ ರೀತಿ ಮಾಡದಂತೆ ಕ್ರಮ ಕೈಗೊಳ್ಳಲಾಗುತ್ತದೆ.

ಕನ್ನಡದ ಹಿತ ಕಾಪಾಡಲು ಸರ್ಕಾರಕ್ಕೆ ಬದ್ಧತೆ ಇದೆ. ಪೊಲೀಸರು ನಿಗಾ ವಹಿಸುತ್ತಿದ್ದಾರೆ. ಇದು ಮುಂದುವರಿಯುವುದು ಎಷ್ಟು ಸಾಧು ಎಂಬುದು ನನ್ನ ಅಭಿಪ್ರಾಯ. ಕೋವಿಡ್​​ನಿಂದ ಬಡವರ ಬದುಕು ಈಗಾಗಲೇ ಅಯೋಮಯವಾಗಿದೆ. ಮತ್ತೊಮ್ಮೆ ಬಂದ್​​ಗೆ ಕರೆ ಕೊಟ್ಟರೆ ಬಡವರಿಗೆ ಹೊರೆ ಆಗುತ್ತದೆ. ಹೀಗಾಗಿ ಸಂಘಟನೆಗಳು ಈ ಬಗ್ಗೆ ಮತ್ತೊಮ್ಮೆ ವಿಚಾರ ಮಾಡಲಿ ಎಂದು ಆರಗ ಜ್ಞಾನೇಂದ್ರ ಮನವಿ ಮಾಡಿದರು.

For All Latest Updates

TAGGED:

ABOUT THE AUTHOR

...view details