ಕರ್ನಾಟಕ

karnataka

ETV Bharat / city

ಅಥಣಿ ರಸ್ತೆ ಅಗಲೀಕರಣಕ್ಕೆ ಫಾಸಿ ಕಟ್ಟೆಗೆ ಘಾಸಿ: ಇತಿಹಾಸ ಪ್ರಿಯರ ಆಕ್ರೋಶ - ಐತಿಹಾಸಿಕ ಪಾಸಿಕಟ್ಟೆ ನಾಶ ನ್ಯೂಸ್​

ಇತ್ತೀಚಿಗೆ 150 ಕೋಟಿ ರೂ. ವೆಚ್ಚದಲ್ಲಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಡಿ ಅಥಣಿ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡುವಾಗ ಐತಿಹಾಸಿಕ ಫಾಸಿಕಟ್ಟೆಯೊಂದು ಒಡೆದು ಹೋಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Historic pasikatte destroyed
ಐತಿಹಾಸಿಕ ಪಾಸಿಕಟ್ಟೆ

By

Published : Jan 12, 2020, 5:11 PM IST

ಅಥಣಿ: ಇತ್ತೀಚಿಗೆ 150 ಕೋಟಿ ರೂ. ವೆಚ್ಚದಲ್ಲಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಡಿ ಅಥಣಿ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡುವಾಗ ಐತಿಹಾಸಿಕ ಫಾಸಿಕಟ್ಟೆಯೊಂದು ಒಡೆದು ಹೋಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಅಗಲೀಕರಣ ಮಾಡುವಾಗ ಐತಿಹಾಸಿಕ ಪಾಸಿಕಟ್ಟೆಯೊಂದು ಒಡೆದು ಹೋಗಿದೆ

ಅಥಣಿ ಇತಿಹಾಸವನ್ನು ತೆರದು ನೋಡಿದಾಗ ತಹಶೀಲ್ದಾರ್​ ಕಚೇರಿ ಹಾಗೂ ಸರ್ಕಾರಿ ಆಸ್ಪತ್ರೆಯ ಮಧ್ಯ ಭಾಗದಲ್ಲಿ ಫಾಸಿಕಟ್ಟೆಯನ್ನು ನಿರ್ಮಿಸಲಾಗಿತ್ತು. ಅಂದ್ರೆ (ಗಲ್ಲು ಶಿಕ್ಷೆ ನೀಡುವ ಸ್ಥಳ) ಇದಕ್ಕೆ ಫಾಸಿಕಟ್ಟೆ ಎಂದು ಕರೆಯುವುದು ರೂಢಿ. ಆದ್ರೆ ಈ ಐತಿಹಾಸಿಕ ಫಾಸಿಕಟ್ಟೆ ರಸ್ತೆ ಅಗಲೀಕರಣ ಮಾಡುವಾಗ ಒಡೆದು ಹೋಗಿದ್ದು, ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ.

ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ಕರ್ತವ್ಯ. ಆದ್ರೆ ಕೆಲವರ ನಿರ್ಲಕ್ಷ್ಯತನದಿಂದಾಗಿ ಈ ಘಟನೆ ನಡೆದಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಉಳಿದ ಇತಿಹಾಸವನ್ನು ರಕ್ಷಿಸಬೇಕಿದೆ.

ABOUT THE AUTHOR

...view details