ಕರ್ನಾಟಕ

karnataka

ETV Bharat / city

Omrican ಭೀತಿ.. ಬೆಳಗಾವಿ ಗಡಿಯಲ್ಲಿ ಹೈ ಅಲರ್ಟ್ - high alert in state border areas

ಒಮಿಕ್ರಾನ್​ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

high alert in belagavi border to avoid omicron
ಒಮಿಕ್ರಾನ್ ಭೀತಿ....ಬೆಳಗಾವಿಯಲ್ಲಿ ಹೈ ಅಲರ್ಟ್

By

Published : Dec 4, 2021, 6:46 PM IST

ಬೆಳಗಾವಿ:ರಾಜ್ಯದಲ್ಲಿ ಒಮಿಕ್ರಾನ್​ ಪತ್ತೆ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿಯ ಬಾಚಿ ಚೆಕ್​ಪೋಸ್ಟ್​​ನಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಮಹಾರಾಷ್ಟ್ರ, ಗೋವಾದಿಂದ ಬರುವ ವಾಹನಗಳ ತೀವ್ರ ತಪಾಸಣೆ ನಡೆಸಲಾಗುತ್ತಿದೆ.

ಕೋವಿಡ್ ವರದಿ ಇಲ್ಲವೇ ವ್ಯಾಕ್ಸಿನ್ ಪಡೆದ ಪ್ರಮಾಣಪತ್ರ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ತುರ್ತಾಗಿ ಬೆಳಗಾವಿ ಪ್ರವೇಶ ಬಯಸುವವರಿಗೆ ಸ್ಥಳದಲ್ಲೇ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ.

ಒಮಿಕ್ರಾನ್ ಭೀತಿ....ಬೆಳಗಾವಿಯಲ್ಲಿ ಹೈ ಅಲರ್ಟ್

ಇದನ್ನೂ ಓದಿ:ಜಿಎಸ್​​ಟಿ ಕಟ್ಟದ ಅಂಗಡಿ ಮಾಲೀಕನ ಬಳಿ ಲಂಚಕ್ಕೆ ಬೇಡಿಕೆ: ಇಬ್ಬರು ಭ್ರಷ್ಟ ಅಧಿಕಾರಿಗಳು ಎಸಿಬಿ ಬಲೆಗೆ

ಬಾಚಿ ಚೆಕ್ ಪೋಸ್ಟ್ ಬಳಿ ಕೋವಿಡ್ ಟೆಸ್ಟ್‌ ಕೇಂದ್ರ ತೆರೆಯಲಾಗಿದೆ. ಕೋವಿಡ್ ಟೆಸ್ಟ್ ಬಳಿಕವೇ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ, ಪೊಲೀಸ್ ಜಂಟಿಯಾಗಿ ಕೋವಿಡ್ ತಪಾಸಣೆ ನಡೆಸುತ್ತಿದೆ. ಇನ್ನುಳಿದಂತೆ ಜಿಲ್ಲೆಯಲ್ಲಿ 23 ಕಡೆ ಚೆಕ್ ಪೋಸ್ಟ್ ತೆರೆಯಲಾಗಿದೆ‌. ಎಲ್ಲ ಕಡೆಯೂ ತೀವ್ರ ತಪಾಸಣೆ ‌ನಡೆಸಲಾಗುತ್ತಿದೆ.

ABOUT THE AUTHOR

...view details