ಚಿಕ್ಕೋಡಿ: ಕೋತಿಯೊಂದರ ರುಂಡ ಕತ್ತರಿಸಿ ಸ್ಮಶಾನದಲ್ಲಿ ದುಷ್ಕರ್ಮಿಗಳು ಎಸೆದಿರುವುದಾಗಿ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದು, ಇದರ ಬಗ್ಗೆ ತನಿಖೆ ನಡೆಯಬೇಕಂದು ಆಗ್ರಹಿಸಿದ್ದಾರೆ.
ಸ್ಮಶಾನದಲ್ಲಿ ರುಂಡ ಕತ್ತರಿಸಿದ ಕೋತಿ ಶವ ಪತ್ತೆ - ರುಂಡ ಕತ್ತರಿಸಿದ ಕೋತಿ ಶವ ಪತ್ತೆ
ಹುಕ್ಕೇರಿ ಪಟ್ಟಣದಲ್ಲಿ ಸ್ಮಶಾನದ ಗೋರಿ ಮೇಲೆ ರುಂಡ ಕತ್ತರಿಸಿರುವ ಕೋತಿಯ ಶವ ಪತ್ತೆಯಾಗಿದ್ದು, ಘಟನೆ ಬಗ್ಗೆ ತನಿಖೆ ನಡೆಸಿ ಆರೋಪಿಗಳ ಬಂಧನಕ್ಕೆ ರಾಮಸೇನಾ ಆಗ್ರಹಿಸಿದೆ.
ರುಂಡ ಕತ್ತರಿಸಿದ ಕೋತಿ ಶವ ಪತ್ತೆ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸ್ಮಶಾನದ ಗೋರಿ ಮೇಲೆ ರುಂಡ ಕತ್ತರಿಸಿರುವ ಕೋತಿಯ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಕೃತ್ಯ ಎಸಗಿ ಕ್ರೌರ್ಯ ಮೆರದಿದ್ದಾರೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ರಾಮಸೇನಾ ಕಾರ್ಯಕರ್ತರು, ಕೋತಿಯ ಅಂತ್ಯಸಂಸ್ಕಾರ ನಡೆಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ಕೋತಿಯ ಮೇಲೆ ಶ್ವಾನ ದಾಳಿ ಮಾಡಿರಬಹುದೆಂದು ಹುಕ್ಕೇರಿ ಪೊಲೀಸರು ಶಂಕಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.