ಕರ್ನಾಟಕ

karnataka

ETV Bharat / city

ರೈತರ ವಿರೋಧದ ನಡುವೆಯೇ ಹಲಗಾ - ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ಆರಂಭ

ಬೆಳಗಾವಿ(Belagavi) ತಾಲೂಕಿನ ಹಲಗಾ-ಮಚ್ಛೆ ಬೈಪಾಸ್ ರಸ್ತೆ(Halaga Machhe Bypass Road work) ಕಾಮಗಾರಿಗೆ ರೈತರು ಭಾರಿ ವಿರೋಧ ವ್ಯಕ್ತಪಡಿಸಿದ್ದರೂ, ಇಂದು ಬೆಳಗ್ಗೆಯಿಂದಲೇ ಕಾಮಗಾರಿ ಆರಂಭಗೊಂಡಿದೆ.

halga Machhe Bypass Road project work begins today
ಹಲಗಾ ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ಆರಂಭ

By

Published : Nov 12, 2021, 12:22 PM IST

Updated : Nov 12, 2021, 12:39 PM IST

ಬೆಳಗಾವಿ: ರೈತರ ವಿರೋಧದ ನಡುವೆಯೂ ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ(halaga Machhe Bypass Road work)ಯನ್ನು ಆರಂಭ ಮಾಡಲಾಗಿದೆ. ಫಲವತ್ತಾದ ಭೂಮಿಯಲ್ಲಿ ಬೆಳೆ ನಾಶಮಾಡಿ ಕಾಮಗಾರಿ ಆರಂಭಿಸುತ್ತಿದ್ದಂತೆ ರೈತರು ವಿರೋಧ ವ್ಯಕ್ತಪಡಿಸಿದರು.

ಹಲಗಾ ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ಆರಂಭ

ಜೆಸಿಬಿ ಮುಂದೆ ನಿಂತು ಬೆಳೆ ಹಾನಿ ಮಾಡದಂತೆ ರೈತರು ಕೋರಿದರು. ಬೆಳೆ ನಾಶ ಮಾಡಲ್ಲ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಖರ್ಚು ಮಾಡಿ ಬೆಳೆದ ಗಜ್ಜರಿ ನಾಶ ಪಡಿಸುತ್ತಿದ್ದೀರಾ ಎಂದು ರೈತರು ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು. ರೈತರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಬೆಳೆ ಇದ್ದ ಜಮೀನು ಬಿಟ್ಟು ಬೇರೆ ಕಡೆ ಕಾಮಗಾರಿ ಆರಂಭಿಸಲಾಯಿತು.

ಇದನ್ನೂ ಓದಿ:ಹಲಗಾ - ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ..ಪ್ರತಿಭಟನೆ ಮಂದುವರಿಸುತ್ತೇವೆಂದ ಅನ್ನದಾತರು

ರೈತರ ಪ್ರತಿಭಟನೆ (belgaum farmers protest) ಹಿನ್ನೆಲೆ, ಬೆಳಗ್ಗೆಯಿಂದಲೇ ಕಾಮಗಾರಿ ಆರಂಭಿಸಲಾಯಿತು. 10ಕ್ಕೂ ಅಧಿಕ ಜೆಸಿಬಿಗಳು, 100ಕ್ಕೂ ಅಧಿಕ ಜನರಿಂದ ಕೆಲಸ ಆರಂಭಿಸಲಾಯಿತು. ಪೊಲೀಸರ ಸರ್ಪಗಾವಲಿನಲ್ಲಿ ಕಾಮಗಾರಿ ಆರಂಭಗೊಂಡಿದೆ. ಕಾಮಗಾರಿ ನಡೆಯುವ ಸ್ಥಳದ ಪಕ್ಕದ ಗದ್ದೆಯಲ್ಲಿ ಜಮಾವಣೆಯಾದ ರೈತರು ಬೆಳೆಗಳನ್ನು ಕೈಯಲ್ಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಡಿಸಿ ಭೇಟಿ, ಕಾಮಗಾರಿ ವೀಕ್ಷಣೆ:

ಬೆಳಗಾವಿ ತಾಲೂಕಿನ ಹಲಗಾ - ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಡಿಸಿ ಎಂ.ಜಿ. ಹಿರೇಮಠ ಭೇಟಿ ನೀಡಿದರು. ಗಜ್ಜರಿ ಬೆಳೆಗೆ ಹೆಚ್ಚಿನ ಪರಿಹಾರ ನೀಡುವಂತೆ ರೈತ ರವಿ ಸೂರ್ಯವಂಶಿ ಮನವಿ ಮಾಡಿದರು.

ತಮ್ಮ ಗದ್ದೆಯಲ್ಲಿ ಬಾವಿಯಿದ್ದು ಪರ್ಯಾಯವಾಗಿ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ. ಕಾಮಗಾರಿ ನಡೆಸಲು ಸಹಕರಿಸಿ ಎಂದು ಡಿಸಿ ಮನವಿ ಮಾಡಿದರು. ಬೆಳಗಾವಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ್, ಡಿಸಿಪಿ ವಿಕ್ರಂ ಆಮಟೆ ಸಾಥ್ ನೀಡಿದರು.

Last Updated : Nov 12, 2021, 12:39 PM IST

ABOUT THE AUTHOR

...view details