ಚಿಕ್ಕೋಡಿ(ಬೆಳಗಾವಿ): ಜೂಜಾಟದ ವಿಚಾರವಾಗಿ ನಡೆದ ಗುಂಪು ಗಲಾಟೆಯಲ್ಲಿ ಬ್ಲೇಡ್ನಿಂದ ಇಬ್ಬರು ಯುವಕರ ಕತ್ತು ಕೊಯ್ದಿರುವ ಘಟನೆ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ವಡ್ಡರ ಗಲ್ಲಿಯ ಸಂತೋಷ ವಡ್ಡರ (25) ಹಾಗೂ ಪರಶುರಾಮ ವಡ್ಡರ (28) ಹಲ್ಲೆಗೊಳಗಾದವರು.
ಗಲಾಟೆಗೆ ಜೂಜಾಟ ಕಾರಣ ಎನ್ನಲಾಗಿದೆ. ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಈ ಸಂದರ್ಭದಲ್ಲಿ ಒಂದು ಗುಂಪಿನವರು ಸಂತೋಷ ಮತ್ತು ಪರಶುರಾಮ ವಡ್ಡರ್ ಎಂಬುವವರ ಮೇಲೆ ದಾಳಿ ನಡೆಸಿ ಬ್ಲೇಡ್ನಿಂದ ಕತ್ತುಕೊಯ್ದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರು ಯುವಕರನ್ನು ಮೊದಲಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಇಬ್ಬರು ಸ್ಥಿತಿ ಚಿಂತಾಜನಕವಾಗಿದ್ದರಿಂದ ಸದ್ಯ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.