ಕರ್ನಾಟಕ

karnataka

By

Published : Jun 22, 2022, 3:57 PM IST

ETV Bharat / city

ಇದಪ್ಪಾ ಪ್ರಾಣಿ ಪ್ರೀತಿ.. ನೆಚ್ಚಿನ ಶ್ವಾನದ ಹುಟ್ದಬ್ಬ ಆಚರಣೆ, 5ಸಾವಿರ ಮಂದಿಗೆ ಭರ್ಜರಿ ಬಾಡೂಟ!

ಬೆಳಗಾವಿಯಲ್ಲಿ ನೆಚ್ಚಿನ ನಾಯಿಯ ಹುಟ್ಟುಹಬ್ಬವನ್ನು ಒಂದು ಕ್ವಿಂಟಲ್ ಕೇಕ್ ಕತ್ತರಿಸುವ ಮೂಲಕ​ ಆಚರಿಸಿದ್ದಲ್ಲದೆ, 5ಸಾವಿರ ಜನರಿಗೆ 3ಕ್ವಿಂಟಲ್ ಚಿಕನ್, 1ಕ್ವಿಂಟಲ್ ಮೊಟ್ಟೆ, ಸಸ್ಯಾಹಾರಿಗಳಿಗೆ 50ಕೆಜಿ ಕಾಜೂಕರಿ ಮಾಡಿಸಿ ಊಟ ಹಾಕಿಸಿದ ಘಟನೆ ಬೆಳಕಿಗೆ ಬಂದಿದೆ.

dog birthday celebration in Belagavi
ನಾಯಿ ಬರ್ತ್ ಡೇ

ಬೆಳಗಾವಿ:ನಿಯತ್ತು, ಸ್ವಾಮಿನಿಷ್ಠೆಗೆ ಹೆಸರುವಾಸಿ ಶ್ವಾನ. ಇದಕ್ಕೆ ಸಾಕ್ಷಿ ಎಂಬಂತೆ ನೆಚ್ಚಿನ ಸಾಕು ನಾಯಿಯ (ಕ್ರಿಶ್) ಜನ್ಮದಿನವನ್ನು ಆಚರಿಸಿ ಗ್ರಾಮದ ಜನರಿಗೆ ವ್ಯಕ್ತಿಯೋರ್ವ ವಿಶೇಷ ಊಟ ಮಾಡಿಸಿದ ಪ್ರಸಂಗ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ. ನಾಯಿಯ ಜನ್ಮದಿನಕ್ಕೆ 1 ಕ್ವಿಂಟಲ್​ ಕೇಕ್​​ನ್ನು ಕತ್ತರಿಸಿದ್ದಾರೆ. ಅಲ್ಲದೇ ಗ್ರಾಮದ 5ಸಾವಿರ ಜನರಿಗೆ 3ಕ್ವಿಂಟಲ್ ಚಿಕನ್, 1ಕ್ವಿಂಟಲ್ ಮೊಟ್ಟೆ, ಸಸ್ಯಾಹಾರಿಗಳಿಗೆ 50ಕೆಜಿ ಕಾಜೂಕರಿ ಊಟ ಹಾಕಿಸಿದ್ದಾರೆ.

ನಾಯಿ ಮಾಲೀಕರಾಗಿರುವ ಇಲ್ಲಿನ ಗ್ರಾಮ ಪಂಚಾಯತ್​ ಸದಸ್ಯ ಶಿವಪ್ಪ‌ ಯಲ್ಲಪ್ಪ ಮರ್ದಿ ಎಂಬುವರು ಈ ರೀತಿ ತಮ್ಮ ನೆಚ್ಚಿನ ನಾಯಿಯ ಜನ್ಮದಿನ ಆಚರಿಸುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಕೇಕ್​ ಕತ್ತರಿಸಿದ ನಂತರ ನಾಯಿಗೆ ಗ್ರಾಮದಲ್ಲಿ ವಾದ್ಯಗಳ ಮೂಲಕ ಅದ್ಧೂರಿಯಾಗಿ ಮೆರವಣಿಗೆಯನ್ನು ಸಹ ಮಾಡಿಸಲಾಗಿದೆ. ಈ ವೇಳೆ ಊರಿನ ಜನರೆಲ್ಲ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.

ನೆಚ್ಚಿನ ನಾಯಿಯ ಬರ್ತ್ ಡೇಗೆ ಒಂದು ಕ್ವಿಂಟಲ್ ಕೇಕ್ ಕಟ್, 5ಸಾವಿರ ಮಂದಿಗೆ ಭರ್ಜರಿ ಬಾಡೂಟ

ಜನ್ಮದಿನ ಆಚರಣೆಗೆ ಕಾರಣ: ನಾಯಿ ಮಾಲೀಕ ಶಿವಪ್ಪ ಮರ್ದಿ ಕಳೆದ 20ವರ್ಷಗಳಿಂದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ. ಈ ವೇಳೆ ನೂತನ ಸದಸ್ಯರೊಬ್ಬರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಹಳೆ ಸದಸ್ಯರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಹಿಂದಿನ ಸದಸ್ಯರು ನಾಯಿಯಂತೆ ತಿಂದು ಹೋಗಿದ್ದಾರೆಂದು ಅವಮಾನ ಮಾಡಿದ್ದಾರಂತೆ. ಹೀಗಾಗಿ ಅವರಿಗೆ ಪ್ರತ್ಯುತ್ತರ ಕೊಡಲು ನಾಯಿ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಲ್ಲದೇ ಐದು ಸಾವಿರ ಜನರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ:'ಐಕಿಯಾ' ಫರ್ನಿಚರ್ ಮಳಿಗೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ABOUT THE AUTHOR

...view details