ಕರ್ನಾಟಕ

karnataka

ETV Bharat / city

ಅಮಾನತುಗೊಂಡ ಸಾರಿಗೆ ಸಿಬ್ಬಂದಿಯನ್ನು ವಾಪಸ್ ಪಡೆಯಲು ನಿರ್ಧಾರ : ಸಚಿವ ಶ್ರೀರಾಮುಲು

ಸರ್ಕಾರ ಸಾರಿಗೆ ಸಿಬ್ಬಂದಿ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಸಾರಿಗೆ ಇಲಾಖೆ ಶಕ್ತಿ ಇಲಾಖೆ ಸಿಬ್ಬಂದಿ. ಹೀಗಾಗಿ, ಸಾರಿಗೆ ಇಲಾಖೆಯ ಸಿಬ್ಬಂದಿಗೆ ಸಂಬಳದಲ್ಲಿ ಯಾರಿಗೂ ತೊಂದರೆಯಾಗದಂತೆ ಮುಂಬರುವ ದಿನಗಳಲ್ಲಿ ಅನುದಾನ ಕೊಡಲಾಗುತ್ತಿದೆ. ಎಲ್ಲರೂ ಜೊತೆಗೂಡಿ ಹೊಸ ಬದಲಾವಣೆಗೆ ಮುನ್ನುಡಿ ಬರೆಯೋಣ..

Minister Sriramulu
ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಶಂಕು ಸ್ಥಾಪನೆ ಕಾರ್ಯಕ್ರಮ

By

Published : Sep 25, 2021, 9:05 PM IST

ಚಿಕ್ಕೋಡಿ(ಬೆಳಗಾವಿ) :ಸಾರಿಗೆ ಇಲಾಖೆ ಮುಷ್ಕರದಲ್ಲಿ ಭಾಗಿಯಾಗಿ ಅಮಾನತುಗೊಂಡ ಸಾರಿಗೆ ಇಲಾಖೆ ಸಿಬ್ಬಂದಿಯನ್ನು ಹಂತ ಹಂತವಾಗಿ ಮರಳಿ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದರು.

ಅಮಾನತುಗೊಂಡ ಸಾರಿಗೆ ಸಿಬ್ಬಂದಿ ವಾಪಸ್ ಸೇವೆಗೆ : ಸಚಿವ ಶ್ರೀರಾಮುಲು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹೊರವಲಯದಲ್ಲಿರುವ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ (ಡ್ರೈವಿಂಗ್ ಟ್ರ್ಯಾಕ್​​)ಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿಎಂ ಬಸವರಾಜ ಬೊಮ್ಮಾಯಿ ಆದೇಶದ ಮೇರೆಗೆ ಮುಷ್ಕರದಲ್ಲಿ ಸಿಬ್ಬಂದಿ ಯಾರಿಗೂ ತೊಂದರೆ ಮಾಡದೆ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಾರದು. ಮುಷ್ಕರದಲ್ಲಿ ಭಾಗಿಯಾಗಿ ಈಗಾಗಲೇ ಅಮಾನತು ಆಗಿರುವ ಇಲಾಖೆ ಸಿಬ್ಬಂದಿಯನ್ನು ಮರಳಿ ಹಂತ ಹಂತವಾಗಿ ತೆಗೆದುಕೊಳ್ಳಲಾಗುತ್ತದೆ ಎಂದರು.

ಸರ್ಕಾರ ಸಾರಿಗೆ ಸಿಬ್ಬಂದಿ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಸಾರಿಗೆ ಇಲಾಖೆ ಶಕ್ತಿ ಇಲಾಖೆ ಸಿಬ್ಬಂದಿ. ಹೀಗಾಗಿ, ಸಾರಿಗೆ ಇಲಾಖೆಯ ಸಿಬ್ಬಂದಿಗೆ ಸಂಬಳದಲ್ಲಿ ಯಾರಿಗೂ ತೊಂದರೆಯಾಗದಂತೆ ಮುಂಬರುವ ದಿನಗಳಲ್ಲಿ ಅನುದಾನ ಕೊಡಲಾಗುತ್ತಿದೆ. ಎಲ್ಲರೂ ಜೊತೆಗೂಡಿ ಹೊಸ ಬದಲಾವಣೆಗೆ ಮುನ್ನುಡಿ ಬರೆಯೋಣ ಎಂದು ಶ್ರೀರಾಮುಲು ಹೇಳಿದರು.

ಪರಿಸರಕ್ಕೆ ಹಾನಿ ಉಂಟಾಗಬಾರದು ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ‌ ಸ್ಕ್ರಾಪ್ ನೀತಿಯನ್ನು ಜಾರಿಗೆ ತಂದಿದ್ದಾರೆ. ಪರಿಸರಕ್ಕೆ ಹಾನಿಯಾಗುವ ಎಲ್ಲ ವಾಹನಗಳ ಸ್ಕ್ರಾಪ್ ಮಾಡಿ ಅಂತವರಿಗೆ ಸಬ್ಸಿಡಿ ನೀಡುವ ಸಲುವಾಗಿ ಹೊಸ ಸ್ಕ್ರಾಪ್ ನೀತಿ ತಂದಿದ್ದಾರೆ.

ಸಂಪೂರ್ಣ ಪಾರದರ್ಶಕ ತರುವ ಸಲುವಾಗಿ ಚಿಕ್ಕೋಡಿಯಲ್ಲಿ ಡ್ರೈವಿಂಗ್ ಟ್ರ್ಯಾಕ್​ಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ರಾಜ್ಯದಲ್ಲಿ ಸಂಪೂರ್ಣ ಪಾರದರ್ಶಕ ತರಲು ಆಟೋಮ್ಯಾಟಿಕ್ ಡ್ರೈವಿಂಗ್ ಸೆಂಟರ್ ತೆರೆಯಲಾಗುತ್ತಿದೆ. ಮಾನವ ರಹಿತವಾಗಿ ಡ್ರೈವಿಂಗ್ ಟ್ರ್ಯಾಕ್ ನಿರ್ವಹಣೆ ಮಾಡಲಿದೆ.

ಮುಂಬರುವ ದಿನದಲ್ಲಿ ವೆಹಿಕಲ್ ಪಿಟ್ನೆಸ್ ಸೆಂಟರ್ ತೆರೆಯಲಾಗುತ್ತದೆ. 30 ಜಿಲ್ಲೆಗಳಲ್ಲಿ ಚಾಲನೆ ಕೊಡಲಾಗುತ್ತದೆ. ಸಾರಿಗೆ ಇಲಾಖೆಯಲ್ಲಿನ ಕಾಗದ ಪತ್ರಗಳ ಬದಲು ಆನ್​ಲೈನ್​​ ವ್ಯವಸ್ಥೆಗೆ ಪ್ರಯತ್ನ ಮಾಡುವ ಮೂಲಕ ಪೇಪರ್‌ಲೆಸ್ ತರಲಾಗುತ್ತದೆ. ಇದಲ್ಲದೇ ಬೆಂಗಳೂರಿಗೆ ಸೀಮಿತ ಆಗಿರುವ ಹೊಸ ಬಸ್​​ಗಳನ್ನು ಉತ್ತರ ಕರ್ನಾಟಕಕ್ಕೆ ಕೊಡಲಾಗುವುದು ಎಂದು ಸಚಿವ ಶ್ರೀರಾಮುಲು ಭರವಸೆ ನೀಡಿದರು.

ಇದನ್ನೂ ಓದಿ:ಸಾರಿಗೆ ಇಲಾಖೆ ನೌಕರರ ಹಿತಕ್ಕೆ ಬದ್ಧ: ಸಾರಿಗೆ ಸಚಿವ ಶ್ರೀರಾಮುಲು

ABOUT THE AUTHOR

...view details