ಕರ್ನಾಟಕ

karnataka

ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸಗೊಳಿಸಿದ ಪುಂಡರ ವಿರುದ್ಧ ಕಾನೂನು ಕ್ರಮ: ಗೋವಿಂದ ಕಾರಜೋಳ

By

Published : Dec 18, 2021, 10:57 AM IST

ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿಕೃತಗೊಳಿಸಿರುವುದು ಖಂಡನೀಯ. ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಗೋವಿಂದ ಕಾರಜೋಳ
ಗೋವಿಂದ ಕಾರಜೋಳ

ಬೆಳಗಾವಿ: ಸಂಗೊಳ್ಳಿ ರಾಯಣ್ಣನ ಪುತ್ಥಳಿ ಕೆಡವಿ ಪುಂಡರು ಅಟ್ಟಹಾಸ ಮೆರೆದಿರುವುದು ಖಂಡನೀಯ. ಇದು ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವಂತ ಕೆಲಸ ಎಂದು ಸಚಿವ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದರು.

ಓದಿ:ಸಂಗೊಳ್ಳಿ ರಾಯಣ್ಣ ಪುತ್ಥಳಿ ಕೆಡವಿ ಪುಂಡರ ಅಟ್ಟಹಾಸ.. ಬೆಳಗಾವಿಯಲ್ಲಿ ಪರಿಸ್ಥಿತಿ ಉದ್ವಿಗ್ನ

ನಗರದಲ್ಲಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರ ಮರಣವನ್ನಪ್ಪಿದ ಮಹಾ ನಾಯಕ. ದೇಶಕ್ಕೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡ ಧೀರ ವ್ಯಕ್ತಿ. ಬ್ರಿಟಿಷರ ವಿರುದ್ಧ ಕಾದಾಡಿ ನಾಡಿನ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದ್ದರು. ಇಂತಹ ವ್ಯಕ್ತಿಯ ಪ್ರತಿಮೆ ವಿಕೃತಗೊಳಿಸಿರುವುದು ಖಂಡನೀಯ ಎಂದರು.

ಓದಿ:ಬೆಳಗಾವಿಯಲ್ಲಿ ಪೊಲೀಸ್​ ವಾಹನಕ್ಕೆ ಕಲ್ಲು ತೂರಿದ 27 ಮಂದಿ ಕಿಡಿಗೇಡಿಗಳು ಅರೆಸ್ಟ್​.. ಪುಂಡರ ಹಾವಳಿ ಸಿಸಿಟಿವಿಯಲ್ಲಿ ಸೆರೆ

ಈ ಕುರಿತು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ನಾಡಿನ ಜನತೆ ಶಾಂತಿ ಕಾಪಾಡಲು ವಿನಂತಿಸುತ್ತೇನೆ ಎಂದು ಸಚಿವರು ಮನವಿ ಮಾಡಿದರು.

ABOUT THE AUTHOR

...view details