ಕರ್ನಾಟಕ

karnataka

By

Published : Dec 12, 2020, 3:53 PM IST

ETV Bharat / city

ಪ್ರಯಾಣಿಕರಿಗೆ ತೊಂದರೆಯಾದ್ರೆ ಅದಕ್ಕೆ ಸರ್ಕಾರವೇ ಹೊಣೆ: ಸತೀಶ್​ ಜಾರಕಿಹೊಳಿ

ಸಾರಿಗೆ ಸಿಬ್ಬಂದಿ ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆಯಾದರೆ ಅದಕ್ಕೆ ಸರ್ಕಾರ ನೇರ ಹೊಣೆಯಾಗುತ್ತದೆ. ಆದಷ್ಟು ಬೇಗ ಸಿಬ್ಬಂದಿಗೆ ನ್ಯಾಯ ಒದಗಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ ಹೇಳಿದರು.

government-is-responsible-for-the-passengers-trouble
ಕೆಎಸ್​ಆರ್​ಟಿಸಿ ಸಿಬ್ಬಂದಿ ಮುಷ್ಕರ

ಚಿಕ್ಕೋಡಿ:ಸಾರಿಗೆ ಸಿಬ್ಬಂದಿ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೇಗನೆ ಸಿಎಂ ಹಾಗೂ ಸಾರಿಗೆ ಮಂತ್ರಿ ತುರ್ತು ಸಭೆ ನಡೆಸಿ ಸಾರಿಗೆ ಸಿಬ್ಬಂದಿಗೆ ನ್ಯಾಯ ಒದಗಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಒತ್ತಾಯಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಪ್ರಯಾಣಿಕರ ತೊಂದರೆಗೆ ನೇರವಾಗಿ ಸರ್ಕಾರವೇ ಹೊಣೆ ಎಂದು ಹೇಳಿದರು.

ಇದನ್ನೂ ಓದಿ: 'ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು, ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಿ'

ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ ತೊಂದರೆ

ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ ತೊಂದರೆ ಉಂಟಾಗುತ್ತದೆ. ಪ್ರತಿ ಸಲ ದನಗಳನ್ನು ಮಾರಾಟ ಮಾಡಬೇಕಾದರೆ ಸರ್ಕಾರದ ಪರ್​ಮಿಟ್ ತೆಗೆದುಕೊಳ್ಳಬೇಕು. ದನಗಳು ಬೇಡವಾದರೆ ಅವುಗಳನ್ನು ಗೋಶಾಲೆಗೆ ಕಳಿಸಬೇಕು. ಆದ್ರೆ ಸರ್ಕಾರದ ಗೋಶಾಲೆಗಳಿಲ್ಲ. ಖಾಸಗಿ ಗೋಶಾಲೆಗೆ ಕಳಿಸಬೇಕಾದರೆ ದಿನಂಪ್ರತಿ ಖರ್ಚುನ್ನು ರೈತರೇ ಕೊಡಬೇಕು. ಗೋಹತ್ಯೆ ನಿಷೇಧ ನೇರವಾಗಿ ರೈತರಿಗೆ ಕುತ್ತಾಗುತ್ತದೆ ಎಂದರು.

ಲವ್​ ಜಿಹಾದ್​ ಕೇವಲ ಮುಸ್ಲಿಂರಿಗೆ ಸಂಬಂಧಿಸಿಲ್ಲ

ಲವ್ ಜಿಹಾದ್​​ ನಿಷೇಧ ಕುರಿತು ಪ್ರತಿಕ್ರಿಯಿಸಿ, ಲವ್ ಜಿಹಾದ್​​ ಅಲ್ಲ ಕೇವಲ ಲವ್ ಅಷ್ಟೇ. ಲವ್ ಜಿಹಾದ್​ ಕೇವಲ ಮುಸ್ಲಿಂರಿಗೆ ಸಂಬಧಿಸಿದ್ದಲ್ಲ, ಎಲ್ಲ ಜಾತಿಯವರಿಗೂ ಸಂಬಂಧಿಸಿದ್ದು ಎಂದರು.

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಅಂತಿಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಕೂಡ ಸಭೆ ಮಾಡಿಲ್ಲ. ಸಭೆ ಮಾಡಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details