ಕರ್ನಾಟಕ

karnataka

ETV Bharat / city

ಗೋವಾದಲ್ಲಿ ಪಕ್ಷಾಂತರ ಭೀತಿ : 35 ಕಾಂಗ್ರೆಸ್​ ಅಭ್ಯರ್ಥಿಗಳಿಂದ ಮಸೀದಿ-ಮಂದಿರ-ಚರ್ಚ್​ನಲ್ಲಿ ಆಣೆ- ಪ್ರಮಾಣ!! - ಗೋವಾ ವಿಧಾನಸಭೆ ಚುನಾವಣೆ ಕಣ

ಮಹಾಲಕ್ಷ್ಮಿ ಮಂದಿರ ಪ್ರಮಾಣದ ಬಳಿಕ ಚರ್ಚ್ ಹಾಗೂ ಮಸೀದಿಗೂ ಕರೆದೊಯ್ದು ಅಭ್ಯರ್ಥಿಗಳಿಂದ ಆಣೆ, ಪ್ರಮಾಣ ಪಡೆಯಲಾಗಿದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಆದ ತಪ್ಪು ಈ ಬಾರಿ ಮರುಕಳಿಸದಿರಲೆಂದು ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ ಇರಿಸಿದೆ..

candidates
ಆಣೆ- ಪ್ರಮಾಣ

By

Published : Jan 24, 2022, 1:05 PM IST

ಬೆಳಗಾವಿ :ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಪಕ್ಷಾಂತರ ತಡೆಗೆ ಕಾಂಗ್ರೆಸ್‌ ನಾಯಕರು ಚುನಾವಣೆ ಮುನ್ನವೇ ತಮ್ಮ 35 ಅಭ್ಯರ್ಥಿಗಳಿಗೆ ಆಣೆ, ಪ್ರಮಾಣ ಮಾಡಿಸಿದ್ದಾರೆ.

ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್, ಗೋವಾ ಕಾಂಗ್ರೆಸ್ ನಾಯಕ ದಿಗಂಬರ್ ಕಾಮತ್, ಪ್ರಸಾದ್ ಗಾಂವ್ಕರ್​ ಸಮ್ಮುಖದಲ್ಲಿ ದೇವರ ಮೇಲೆ ಆಣೆ, ಪ್ರಮಾಣ ಮಾಡಿಸಲಾಗಿದೆ.

35 ಕಾಂಗ್ರೆಸ್​ ಅಭ್ಯರ್ಥಿಗಳಿಂದ ಮಸೀದಿ, ಮಂದಿರ ಚರ್ಚ್​ನಲ್ಲಿ ಆಣೆ-ಪ್ರಮಾಣ

ಗೋವಾದ ಪಣಜಿಯಲ್ಲಿ 35 ಕಾಂಗ್ರೆಸ್ ಅಭ್ಯರ್ಥಿಗಳನ್ನ ಸೇರಿಸಿ ಸಭೆ ನಡೆಸಿದ ನಾಯಕರು, ಬಳಿಕ ಬಸ್‌ನಲ್ಲಿ ಮಂದಿರ, ಮಸೀದಿ, ಚರ್ಚ್‌ಗೆ ಕರೆದೊಯ್ದು ಆಣೆ-ಪ್ರಮಾಣ ಮಾಡಿಸಲಾಗಿದೆ. ಪಣಜಿಯ ಮಹಾಲಕ್ಷ್ಮಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ ಸರ್ವ ಅಭ್ಯರ್ಥಿಗಳು, ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ 5 ವರ್ಷ ಪಕ್ಷಾಂತರ ಮಾಡಲ್ಲ ಎಂದು ಆಣೆ ಮಾಡಿದ್ದಾರೆ.

ಮಹಾಲಕ್ಷ್ಮಿ ಮಂದಿರ ಪ್ರಮಾಣದ ಬಳಿಕ ಚರ್ಚ್ ಹಾಗೂ ಮಸೀದಿಗೂ ಕರೆದೊಯ್ದು ಅಭ್ಯರ್ಥಿಗಳಿಂದ ಆಣೆ, ಪ್ರಮಾಣ ಪಡೆಯಲಾಗಿದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಆದ ತಪ್ಪು ಈ ಬಾರಿ ಮರುಕಳಿಸದಿರಲೆಂದು ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ ಇರಿಸಿದೆ.

2017ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ ಗೆದ್ದು ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಆಗ ಕಾಂಗ್ರೆಸ್ ಶಾಸಕರನ್ನು ಸೆಳೆದು ಬಿಜೆಪಿ ಸರ್ಕಾರ ರಚಿಸಿತ್ತು. ಐದು ವರ್ಷಗಳ ಅವಧಿಯಲ್ಲಿ ಗೋವಾದ 17 ಕಾಂಗ್ರೆಸ್ ಶಾಸಕರ ಪೈಕಿ 15 ಶಾಸಕರು ಪಕ್ಷಕ್ಕೆ ರಾಜೀ‌ನಾಮೆ ನೀಡಿದ್ದರು.

ಇದನ್ನೂ ಓದಿ:ಆಟದ ಮೇಲಿನ ಒತ್ತಡದಿಂದಲೇ ನಾಯಕತ್ವ ಬಿಟ್ಟ ವಿರಾಟ್​ ಕೊಹ್ಲಿ: ಪಾಕಿಸ್ತಾನದ ಶೋಯೆಬ್​ ಅಖ್ತರ್​ ಉವಾಚ

ABOUT THE AUTHOR

...view details