ಚಿಕ್ಕೋಡಿ: ಪ್ರವಾಹಕ್ಕೆ ಸಿಲುಕಿದ ಮನೆಯ ಪರಿಸ್ಥಿತಿ ಹೇಗಿದೆ?, ಮನೆಯ ಸಾಮಗ್ರಿಗಳು ನೀರು ಪಾಲಾಗಿವೆಯೋ, ಇಲ್ಲವೋ ಎಂಬುದನ್ನು ನೋಡಲು ಹೋದ ಇಬ್ಬರಲ್ಲಿ ಒಬ್ಬಾತ ಕೃಷ್ಣಾ ನದಿಯ ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ನಡೆದಿದೆ.
ಪ್ರವಾಹಕ್ಕೆ ಸಿಲುಕಿದ ಮನೆಯ ಸ್ಥಿತಿ ನೋಡಲು ಹೋಗಿ ಕೃಷ್ಣೆ ಪಾಲಾದ ದುರ್ದೈವಿ..
ಪ್ರವಾಹಕ್ಕೆ ಸಿಲುಕಿದ ಮನೆಯ ಪರಿಸ್ಥಿತಿ ಹೇಗಿದೆ? ಮನೆಯ ಸಾಮಗ್ರಿಗಳು ನೀರು ಪಾಲಾಗಿವೆಯೋ ಇಲ್ಲವೋ ಎಂಬುದನ್ನು ನೋಡಲು ಹೋದ ಇಬ್ಬರಲ್ಲಿ ಒಬ್ಬ ಕೃಷ್ಣಾ ನದಿಯ ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ನಡೆದಿದೆ.
ಮನೆ ವೀಕ್ಷಣೆಗೆ ತೆರಳಿ ನದಿ ಪಾಲಾದ ವ್ಯಕ್ತಿ
ಕಾತ್ರಾಳ ಗ್ರಾಮದ ಜಯಪಾಲ ರಾಯಪ್ಪ ಯರಂಡೊಲಿ (40) ನೀರು ಪಾಲದ ವ್ಯಕ್ತಿ. ಮಹಾವೀರ ಕಲ್ಲಪ ಯರಂಡೊಲಿ (25) ಬದುಕುಳಿದವರು. ಬೆಳಗಿನ ಜಾವ ತಮ್ಮ ಮನೆಯ ವೀಕ್ಷಣೆಗೆಂದು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಈಗಾಗಲೇ ಸ್ಥಳಕ್ಕೆ ಎನ್ಡಿಆರ್ಎಫ್ ತಂಡ ಧಾವಿಸಿ ಕಾರ್ಯಾಚರಣೆ ನಡೆಸುತ್ತಿದ್ದು, ಸ್ಥಳಕ್ಕೆ ಕಾಗವಾಡ ಪಿಎಸ್ಐ ಹಾಗೂ ಉಪ ತಹಶೀಲ್ದಾರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಶವ ಹುಡುಕಾಟದ ಕಾರ್ಯ ಭರದಿಂದ ಸಾಗಿದೆ.