ಕರ್ನಾಟಕ

karnataka

ETV Bharat / city

ಬಿಎಸ್‌ವೈ ಆಪ್ತನಾಗಿದ್ದಕ್ಕೆ ಬುಡಾ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ ಮಾಡಿರಬಹುದು: ಘೂಳಪ್ಪ ಹೊಸಮನಿ - ಘೂಳಪ್ಪ ಹೊಸಮನಿ ಲೇಟೆಸ್ಟ್ ನ್ಯೂಸ್

ನಾನು ಯಡಿಯೂರಪ್ಪ ಅವರ ಆಪ್ತ ಅನ್ನೋದು ಸತ್ಯ, ಅದರಲ್ಲಿ ಎರಡು ಮಾತಿಲ್ಲ. 1990ರಿಂದ ಬಿಜೆಪಿಯಲ್ಲಿದ್ದು, ಯಡಿಯೂರಪ್ಪರ ಜೊತೆಗಿದ್ದೇನೆ. ನಾನು ಬಿಎಸ್‌ವೈ ಆಪ್ತ ಎನ್ನುವ ಕಾರಣಕ್ಕೆ ಬುಡಾ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ ಮಾಡಿರಬಹುದು ಎಂದು ನಿಕಟಪೂರ್ವ ಅಧ್ಯಕ್ಷ ಘೂಳಪ್ಪ ಹೊಸಮನಿ ಹೇಳಿದ್ದಾರೆ.

ghoolappa hosamani
ಘೂಳಪ್ಪ ಹೊಸಮನಿ

By

Published : Oct 22, 2021, 10:57 AM IST

Updated : Oct 22, 2021, 1:12 PM IST

ಬೆಳಗಾವಿ: ನಾನು ಬಿಎಸ್‌ವೈ ಆಪ್ತ ಎನ್ನುವ ಕಾರಣಕ್ಕೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ ಮಾಡಿರಬಹುದು ಎಂದು ನಿಕಟಪೂರ್ವ ಅಧ್ಯಕ್ಷ ಘೂಳಪ್ಪ ಹೊಸಮನಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಕಡೆ ವ್ಯವಸ್ಥಿತವಾದ ಸಂಚು ನಡೆಯುತ್ತಿದೆಯೆಂದು ಜನರು ಮಾತನಾಡುತ್ತಿದ್ದಾರೆ. ನಾನು ಯಡಿಯೂರಪ್ಪ ಅವರ ಆಪ್ತ ಅನ್ನೋದು ಸತ್ಯ, ಅದರಲ್ಲಿ ಎರಡು ಮಾತಿಲ್ಲ. 1990ರಿಂದ ಬಿಜೆಪಿಯಲ್ಲಿದ್ದು, ಯಡಿಯೂರಪ್ಪರ ಜೊತೆಗಿದ್ದೇನೆ. ಕಳೆದ ಒಂದೂವರೆ ವರ್ಷದಿಂದ ಒಳ್ಳೆಯ ಕೆಲಸ ಮಾಡಲು ಬಿಎಸ್‌ವೈ ಸರ್ಕಾರದಲ್ಲಿ ಅವಕಾಶ ಕೊಟ್ಟಿದ್ದರು.

ಆದರೆ ಬೆಳಗಾವಿ ರಾಜಕಾರಣದಲ್ಲಿ ಯಾರು ಹೇಗೆ ರಾಜಕೀಯ ಚದುರಂಗದಾಟ ಆಡುತ್ತಾರೆ ಎಂಬುದು ತಮಗೆಲ್ಲ ಗೊತ್ತಿರುವ ವಿಚಾರ ಎಂದು ನಗರ ವ್ಯಾಪ್ತಿಯ ಇಬ್ಬರು ಬಿಜೆಪಿ ಶಾಸಕ (ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ್)ರ ವಿರುದ್ಧ ಘೂಳಪ್ಪ ಹೊಸಮನಿ ಅಸಮಾಧಾನ ವ್ಯಕ್ತಪಡಿಸಿದರು.

ಘೂಳಪ್ಪ ಹೊಸಮನಿ

ನಗರದಲ್ಲಿ ಕಾನೂನು ಬಾಹಿರ ಲೇಔಟ್‌ಗಳು ಎಷ್ಟಾಗಿದ್ದಾವೆ ಎಂಬುದು ಎಲ್ಲರಿಗೂ ಗೊತ್ತು. ಇಬ್ಬರು ಶಾಸಕರು ಸಹಕಾರ ಕೊಟ್ಟಿಲ್ಲ ಅಂತೇನಿಲ್ಲ. ಎರಡ್ಮೂರು ಸಭೆಗೆ ಬಂದಿದ್ದರು. ನಮ್ಮವರೇ ಶಾಸಕರು ಇದ್ದರೂ ಅವರ ಭಾವನೆ ಅರ್ಥ ಮಾಡಿಕೊಳ್ಳೋಕಾಗಲ್ಲ. ರಾಜಕಾರಣದಲ್ಲಿ ಇನ್ನೊಬ್ಬರನ್ನು ಮುಂದೆ ತರಬಾರದೆಂಬ ಉದ್ದೇಶ ಇರಬಹುದು. ಎರಡು ಬಾರಿ ಶಾಸಕರು ಬುಡಾ ಸಭೆಗೆ ಏಕೆ ಬರಲಿಲ್ಲ ಅಂತ ಅವರನ್ನೇ ಕೇಳಿ. ಸಭೆಗೆ ಬರುತ್ತೇವೆ ಎಂದು ನೋಟೀಸ್‌ಗೆ ಸೀಲ್ ಹೊಡೆದು ಸಹಿ ಮಾಡಿ ಕೊಟ್ಟಿದ್ದರು. ನಂತರ ಗೈರಾಗಿ ಸಭೆ ಮುಂದೂಡುವಂತೆ ಮಾಡಿದರು. ಇನ್ನೂ ಈ ಹಿಂದೆ ನಾನು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈ ಕಾರಣಕ್ಕೂ ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿರಬಹುದು ಎಂದರು.

ಈ ಸಂಬಂಧ ಸಿಎಂ ಆಗಲಿ, ಪಕ್ಷದ ರಾಜ್ಯಾಧ್ಯಕ್ಷರನ್ನಾಗಲಿ ನಾನು ಭೇಟಿಯಾಗಿಲ್ಲ. ಯಡಿಯೂರಪ್ಪರವರು ಬ್ಯುಸಿ ಇರುವ ಕಾರಣಕ್ಕೆ ಅವರ ಜೊತೆ ಮಾತುಕತೆ ನಡೆಸಿಲ್ಲ. ಆದರೆ ನಗರದಲ್ಲಿ ‌ಲಿಂಗಾಯತ ನಾಯಕರನ್ನು ಟಾರ್ಗೆಟ್ ಮಾಡುತ್ತಿರಬಹುದು. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕೇವಲ 3,000 ಲಿಂಗಾಯತರು ಇರುವ ಕಾರಣಕ್ಕೆ ಪಾಲಿಕೆ ಚುನಾವಣೆಯಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ಕೊಡಲಾಗಿದೆ ಎಂದಿದ್ದರು. ದಕ್ಷಿಣ ಕ್ಷೇತ್ರದಲ್ಲಿ ಎಷ್ಟು ಜನ ಲಿಂಗಾಯತರಿದ್ದಾರೆಂದು ಡಿಸಿಯವರನ್ನು ಕೇಳಿ, ಗೊತ್ತಾಗುತ್ತೆ ಎಂದರು.

ಇದನ್ನೂ ಓದಿ:ಬಿಎಸ್​ವೈ ಆಪ್ತನಿಗೆ ಕೊಕ್.. ಬುಡಾ ಅಧ್ಯಕ್ಷ ಸ್ಥಾನಕ್ಕೆ ಅಭಯ್ ಪಾಟೀಲ್​ ಬೆಂಬಲಿಗನಿಗೆ ಮಣೆ!

ಜಾತಿ ರಾಜಕಾರಣ ಮಾಡಬಾರದು, ಬಿಜೆಪಿ ರಾಷ್ಟ್ರೀಯ ಪಕ್ಷ. ರಾಷ್ಟ್ರ, ರಾಜ್ಯದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿ ಇದೆ. ಎಲ್ಲ ಸಮುದಾಯದವರನ್ನು ಜೊತೆಗೆ ಕರೆದುಕೊಂಡು ಹೋಗಬೇಕು. ಮುಂದಿನ ರಾಜಕೀಯ ನಡೆ ಕುರಿತಾಗಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದರು.

Last Updated : Oct 22, 2021, 1:12 PM IST

ABOUT THE AUTHOR

...view details