ಬೆಳಗಾವಿ :ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯ ಅವಶ್ಯಕತೆ ಏನಿದೆ ಎಂದು ಸರ್ಕಾರಕ್ಕೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಪ್ರಶ್ನಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿಯ ಉದ್ದೇಶ ಸಮುದಾಯದ ಟಾರ್ಗೆಟ್ ಅಲ್ಲ, ಇದು ವೋಟ್‌ಗಳ ಟಾರ್ಗೆಟ್ ಎಂದು ಆರೋಪಿಸಿದರು.
ಮತಾಂತರ ನಿಷೇಧ ಕಾಯ್ದೆ ಜಾರಿಗೆಗೆ ನಮ್ಮ ಸಂಪೂರ್ಣ ವಿರೋಧ ಇದೆ. ಮಹಾತ್ಮಾ ಗಾಂಧಿಜೀಯವರು ಹೇಳಿದಂತೆ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂಬುದು ನಮ್ಮ ಭಾವನೆ. ಇಚ್ಛೆ ಇದ್ದವರು ಮತಾಂತರ ಆಗುತ್ತಾರೆ. ಇಲ್ಲದವರು ಆಗಲ್ಲ. ನಾವು ಈ ಮಸೂದೆ ವಿರೋಧ ಮಾಡುತ್ತೇವೆ ಎಂದರು.
ನಮ್ಮದು ಪ್ರಾದೇಶಿಕ ಪಕ್ಷ. ಉತ್ತರ ಕರ್ನಾಟಕದ ಅಭಿವೃದ್ಧಿ ಉದ್ದೇಶವಿಟ್ಟುಕೊಂಡೇ ಹೆಚ್ಡಿಕೆ ಬೆಳಗಾವಿಯಲ್ಲಿ ಅಧಿವೇಶನಕ್ಕೆ ನಾಂದಿ ಹಾಡಿದರು. ಉತ್ತರ ಕರ್ನಾಟಕಕಕ್ಕೆ ಕುಮಾರಸ್ವಾಮಿ ಏನೇನು ಮಾಡಿದ್ದಾರೆ ಎಂದು ಜ್ಞಾಪಕದಲ್ಲಿಟ್ಟುಕೊಳ್ಳಬೇಕು ಎಂದು ರೇವಣ್ಣ ಹೇಳಿದರು.