ಕರ್ನಾಟಕ

karnataka

ETV Bharat / city

ಬೆಳಗಾವಿ: ಹಾಸ್ಟೆಲ್​​ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ - ರಾಮದುರ್ಗ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ಶಾಲೆ

ಹಾಸ್ಟೆಲ್​ನಲ್ಲಿ ಆಹಾರ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, ಅವರಲ್ಲಿ ನಾಲ್ವರನ್ನು ರಾಮದುರ್ಗ ತಾಲೂಕು ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

Food poison in belagavi girls hostel
ಹಾಸ್ಟೆಲ್​​ನ ಊಟ ಸೇವನೆ: ಬೆಳಗಾವಿಯ 14 ವಿದ್ಯಾರ್ಥಿನಿಯರು ಅಸ್ವಸ್ಥ

By

Published : Feb 9, 2022, 1:55 PM IST

Updated : Feb 9, 2022, 2:26 PM IST

ಬೆಳಗಾವಿ:ವಸತಿ ನಿಲಯದಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ಶಾಲೆಯಲ್ಲಿ ನಡೆದಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರ ಹಾಸ್ಟೆಲ್ ಇದಾಗಿದ್ದು, ಇಲ್ಲಿನ ಹದಿನಾಲ್ಕು ವಿದ್ಯಾರ್ಥಿನಿಯರು ಊಟ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಎಲ್ಲಾ ವಿದ್ಯಾರ್ಥಿಯರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯರಿಗೆ ಚಿಕಿತ್ಸೆ

ನಾಲ್ವರು ವಿದ್ಯಾರ್ಥಿನಿಯರನ್ನು ತಾಲೂಕು ಆಸ್ಪತ್ರೆಯಿಂದ ರಾಮದುರ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ವಿದ್ಯಾರ್ಥಿನಿಯರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಾಮದುರ್ಗ ತಹಶೀಲ್ದಾರ್ ಮಾಹಿತಿ ನೀಡಿದರು.

ಹಾಸ್ಟೆಲ್​ನಲ್ಲಿ ಊಟದ ಅವ್ಯವಸ್ಥೆ ಬಗ್ಗೆ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸ್ಟೆಲ್‌ನಲ್ಲಿ ಊಟ ಸರಿಯಾಗಿ ಕೊಡಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಇದನ್ನೂ ಓದಿ:ಹಿಜಾಬ್, ಕೇಸರಿ ಶಾಲು ಎರಡೂ ಕೂಡ‌ ಕಾಲೇಜು ಕ್ಯಾಂಪಸ್​​ನಲ್ಲಿ ಬರಬಾರದು: ಆರ್.ಅಶೋಕ್​​​

Last Updated : Feb 9, 2022, 2:26 PM IST

ABOUT THE AUTHOR

...view details