ಕರ್ನಾಟಕ

karnataka

ETV Bharat / city

ನೆರೆ ಪರಿಹಾರದಲ್ಲಿ ಅಕ್ರಮ ಆರೋಪ: ಲೋಕೋಪಯೋಗಿ ಇಲಾಖೆ ಕಚೇರಿಗೆ ನೆರೆ ಸಂತ್ರಸ್ತರ ಮುತ್ತಿಗೆ - ನೆರೆ ಸಂತ್ರಸ್ತರ ಮುತ್ತಿಗೆ

ನಿಜವಾದ ಫಲಾನುಭವಿಗಳಿಗೆ ಪರಿಹಾರ ದೊರಕಿಲ್ಲ.‌ ಸಂಬಂಧಿಸಿದ ಅಧಿಕಾರಿಯೊಬ್ಬರು ಸರಿಯಾಗಿ ಸಮೀಕ್ಷೆ ಮಾಡಿಲ್ಲ. ತಮಗೆ ಬೇಕಾದ ಜನರಿಗೆ ಪರಿಹಾರ ನೀಡಿದ್ದಾರೆ ಎಂದು ನೆರೆ ಸಂತ್ರಸ್ತರು ಆರೋಪಿಸಿದ್ದಾರೆ.

Chikkodi
ಲೋಕೋಪಯೋಗಿ ಇಲಾಖೆ ಕಚೇರಿಗೆ ನೆರೆ ಸಂತ್ರಸ್ತರ ಮುತ್ತಿಗೆ

By

Published : Nov 11, 2021, 6:25 PM IST

ಚಿಕ್ಕೋಡಿ: ನೆರೆ ಪರಿಹಾರ ನೀಡುವಲ್ಲಿ ಅಕ್ರಮ ಆರೋಪ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರು ಲೋಕೋಪಯೋಗಿ ಇಲಾಖೆ (Public Works Dept) ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.


ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿರುವ ಲೋಕೋಪಯೋಗಿ ಕಚೇರಿಗೆ ಆಗಮಿಸಿದ ತಾಲೂಕಿನ ಯಡೂರ, ಯಡೂರವಾಡಿ ಗ್ರಾಮದ ನೂರಾರು ನೆರೆ ಸಂತ್ರಸ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ನೆರೆ ಸಂತ್ರಸ್ತರು, ನೆರೆ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡಿದ್ದೇವೆ. ನಿಜವಾದ ಫಲಾನುಭವಿಗಳಿಗೆ ಪರಿಹಾರ ದೊರಕಿಲ್ಲ.‌ಸಂಬಂಧಿಸಿದ ಅಧಿಕಾರಿಯೊಬ್ಬರು ಸರಿಯಾಗಿ ಸಮೀಕ್ಷೆ ಮಾಡಿಲ್ಲ. ತಮಗೆ ಬೇಕಾದ ಜನರಿಗೆ ಪರಿಹಾರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇತ್ತ ಪರಿಹಾರ ವಿತರಣೆ ಮಾಡುವ ಸಂದರ್ಭದಲ್ಲೂ ಎಬಿಸಿ ಕೆಟೆಗೆರಿ ಅನ್ವಯವಾಗಿಲ್ಲ. ಈ ಬಗ್ಗೆ ಪ್ರಶ್ನಿಸಿ ಕಚೇರಿಗೆ ಅಲೆದಾಡಿ ಸಾಕಾಗಿದೆ. ನಮಗೆ ಪರಿಹಾರ ನೀಡುವ ತನಕ ಸ್ಥಳಬಿಟ್ಟು ಕದಲುವುದಿಲ್ಲ. ಮತ್ತೊಮ್ಮೆ ಸಮೀಕ್ಷೆ ಮಾಡಿ ನಿಜವಾದ ನೆರೆ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ABOUT THE AUTHOR

...view details