ಅಥಣಿ:ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ಅಪಾಯದ ಮಟ್ಟದಲ್ಲಿ ನೀರು ಹರಿದು ಬರುತ್ತಿರುವುದರಿಂದ ತಾಲೂಕಿನ ನದಿ ಪಾತ್ರದ ಜನರಿಗೆ ಆತಂಕ ಮೂಡಿಸಿದೆ. ಆದರೆ ಕೆಲವರು ಭೋರ್ಗರೆದು ಹರಿಯುವ ನೀರಿನ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುವ ಸಾಹಸಕ್ಕೆ ಮುಂದಾಗುತ್ತಿದ್ದಾರೆ.
ಅಥಣಿ: ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ, ಕೆಲವರಿಗೆ ಸೆಲ್ಫಿ ಶೋಕಿ! - ದರೂರ ಹಲ್ಯಾಳ ಮಧ್ಯ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ
ಅಥಣಿ ತಾಲೂಕಿನ ದರೂರ ಹಲ್ಯಾಳದ ಮಧ್ಯೆ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆಯ ಮೇಲೆ ಅಕ್ಕಪಕ್ಕದ ಗ್ರಾಮಸ್ಥರು, ಪ್ರವಾಸಿಗರು ಫೋಟೋ ತೆಗೆಸಿಕೊಳ್ಳುವುದಕ್ಕೆ ಮುಂದಾಗುತ್ತಿದ್ದಾರೆ.
ಅಥಣಿ ತಾಲೂಕಿನ ದರೂರ ಹಲ್ಯಾಳದ ಮಧ್ಯೆ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆಯ ಮೇಲೆ ಅಕ್ಕಪಕ್ಕದ ಗ್ರಾಮಸ್ಥರು, ಪ್ರವಾಸಿಗರು ಫೋಟೋ ತೆಗೆಸಿಕೊಳ್ಳುವುದಕ್ಕೆ ಮುಂದಾಗುತ್ತಿದ್ದಾರೆ. ಈ ಸೇತುವೆ ರಸ್ತೆ ರಾಜ್ಯ ಹೆದ್ದಾರಿ ಆಗಿರೋದ್ರಿಂದ ವಾಹನ ದಟ್ಟಣೆ ಸಾಮಾನ್ಯವಾಗಿರುತ್ತದೆ. ಅದರ ಮಧ್ಯೆ ಇವರು ತಮ್ಮ ವಾಹನಗಳನ್ನು ಅಲ್ಲೇ ನಿಲ್ಲಿಸಿ ಚಿಕ್ಕ ಚಿಕ್ಕ ಮಕ್ಕಳ ಜೊತೆ ಫೋಟೋ ಶೂಟ್ಗೆ ಮುಂದಾಗಿದ್ದಾರೆ.
ಹಲ್ಯಾಳ ಸೇತುವೆ ಕೆಳ ಭಾಗದಲ್ಲಿ ಕೈಗೆಟುಕುವ ಮಟ್ಟದಲ್ಲಿ ನೀರು ಹರಿಯುತ್ತಿದೆ. ಸಮುದ್ರದ ರೀತಿಯಲ್ಲಿ ಕೃಷ್ಣಾ ನದಿ ತನ್ನ ರೌದ್ರಾವತಾರ ತಾಳಿ ಹರಿಯುತ್ತಿರುವ ಸಂದರ್ಭದಲ್ಲಿ ಸ್ವಲ್ಪ ಅಚಾತುರ್ಯ ನಡೆದರೆ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಅಥಣಿ ಪೊಲೀಸರು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಸುರಕ್ಷೆತೆ ಕಾಪಾಡುವಂತೆ ಕೆಲವು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.