ಬೆಳಗಾವಿ: ಭ್ರಷ್ಟಾಚಾರದ ವಿಚಾರವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಕಿತ್ತಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಾಗನೂರು ಗ್ರಾ.ಪಂ. ಕಚೇರಿ ಆವರಣದಲ್ಲಿ ನಡೆದಿದೆ.
ಮನೆ, ಜಾಗದ ಉತಾರ ನೀಡಲು 7 ರಿಂದ 8 ಸಾವಿರ ರೂ. ಬೇಡಿಕೆ ಇಡುತ್ತಿರುವ ಆರೋಪ ನಾಗನೂರು ಪಿಡಿಒ ಅವಿನಾಶ್ ಅಂಗರಗಟ್ಟಿ ವಿರುದ್ಧ ಕೇಳಿ ಬಂದಿತ್ತು. ಹಣಕ್ಕೆ ಬೇಡಿಕೆ ಇಡುತ್ತಿರುವುದೇಕೆ ಎಂದು ಗ್ರಾ.ಪಂ. ಸದಸ್ಯ ಬಸವರಾಜ್ ಉಣಕಲ್ ಪ್ರಶ್ನಿಸಿದ್ದಾರೆ. ಇದಕ್ಕೆ ಕುಪಿತಗೊಂಡ ಪಿಡಿಒ ಗ್ರಾ.ಪಂ. ಸದಸ್ಯನಿಗೆ ಕಪಾಳಮೋಕ್ಷ ಮಾಡಿದ್ದಾರೆಂದು ತಿಳಿದುಬಂದಿದೆ.